ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರ ಆಡಳಿತ ಸಮಿತಿ ಮತ್ತು ಭಜನಾ ಮಂಡಳಿಗೆ ಆಯ್ಕೆ, ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ

0

ಪುತ್ತೂರು: ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಎ.6 ರಂದು ಶ್ರೀರಾಮ ನವಮಿ ಪ್ರಯುಕ್ತ ವಿಶೇಷ ಭಜನಾ ಸೇವೆ, ಅನ್ನಸಂತರ್ಪಣೆ ನಡೆಯಿತು. ಶ್ರೀರಾಮ ಮಂದಿರದ ಆಡಳಿತ ಸಮಿತಿ ಮತ್ತು ಶ್ರೀರಾಮ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮವೂ ನಡೆಯಿತು.

ಮುಂದಿನ 3 ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರ ಮಾಡಲಾಯಿತು. ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಜೈಶಂಕರ್ ಬೆದ್ರುಮಾರು ಮಾತನಾಡಿ, 3 ವರ್ಷಗಳ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಮಂದಿರದ ಎಲ್ಲಾ ದೇವತಾ ಕಾರ್ಯಗಳು ಬಹಳ ಯಶಸ್ವಿಯಾಗಿ ನಡೆದಿದೆ. ನವರಾತ್ರಿ ಉತ್ಸವದಿಂದ ಹಿಡಿದು ವರ ಮಹಾಲಕ್ಷ್ಮೀ ವೃತ ಪೂಜೆಯ ತನಕ ಎಲ್ಲಾ ಕಾರ್ಯಗಳಲ್ಲಿ ಭಕ್ತರು ಬಹಳ ಒಳ್ಳೆಯ ರೀತಿಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಆಡಳಿತ ಸಮಿತಿಯೊಂದಿಗೆ ಸಹಕರಿಸಿದ ಎಲ್ಲರಿಗೂ ಸಪರಿವಾರ ಶ್ರೀರಾಮಚಂದ್ರ ಒಳಿತನ್ನು ಮಾಡಲಿ, ಮುಂದಿನ ಸಮಿತಿಗೆ ನಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿ ಶುಭ ಹಾರೈಸಿದರು.

ಭಜನಾ ಮಂಡಳಿಯ ಅಧ್ಯಕ್ಷ ಕರುಣಾಕರ ರೈ ಕೋರಂಗ ಮಾತನಾಡಿ, ಭಜನಾ ಸೇವಾರ್ಥಿಗಳ ವಾಟ್ಸಫ್ ಗ್ರೂಪ್ ಮಾಡಿಕೊಂಡು, ಆಡಳಿತ ಸಮಿತಿಯವರ ಸಂಪೂರ್ಣ ಸಹಕಾರದೊಂದಿಗೆ ಒಳ್ಳೆಯ ರೀತಿಯಲ್ಲಿ ಭಜನಾ ಕಾರ್ಯಕ್ರಮಗಳು ನಡೆದುಕೊಂಡು ಬಂದಿದೆ. ಪ್ರತಿಯೊಬ್ಬರಿಗೂ ಶ್ರೀರಾಮ ದೇವರು ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.


ಆಡಳಿತ ಸಮಿತಿ ಕೋಶಾಧಿಕಾರಿ ಐ.ಸಿ.ಕೈಲಾಸ್ ಕೆದಂಬವಾಡಿರವರು ಮಾತನಾಡಿ, ಜೈಶಂಕರ್ ಬೆದ್ರುಮಾರ್‌ರವರ ಅಧ್ಯಕ್ಷತೆಯ ಆಡಳಿತ ಸಮಿತಿಯಿಂದ ಮಂದಿರದಲ್ಲಿ ಬಹಳಷ್ಟು ಅಭಿವೃದ್ದಿ ಕೆಲಸಗಳು ನಡೆದಿದೆ. ಮುಂದಿನ ದಿನಗಳಲ್ಲಿ ಪಾಕಶಾಲೆಯ ತುರ್ತು ಅಭಿವೃದ್ದಿಯಾಗಬೇಕಾಗಿದೆ. ಆದ್ದರಿಂದ ಮುಂದಿನ ಆಡಳಿತ ಸಮಿತಿ ತಕ್ಷಣದಿಂದಲೇ ಪಾಕಶಾಲೆಯ ಕೆಲಸ ಕಾರ್ಯಗಳಿಗೆ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ರೈ ಕೋರಂಗರವರು ಮಾತನಾಡಿ, ಜೈಶಂಕರ್ ರೈ ಬೆದ್ರುಮಾರು ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಮಂದಿರದಲ್ಲಿ ದೇವತಾ ಕಾರ್ಯಗಳು ಹಾಗೂ ಅಭಿವೃದ್ದಿ ಕೆಲಸಗಳು ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಭಕ್ತಾಧಿಗಳು ಕೂಡ ಉತ್ತಮ ಸಹಕಾರ ನೀಡಿದ್ದಾರೆ. ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳೊಂದಿಗೆ ಮುಂದಿನ ಸಮಿತಿಯಿಂದಲೂ ಉತ್ತಮ ಕೆಲಸಗಳು ಮೂಡಿಬರಲಿ, ನನ್ನಿಂದ ಸಾಧ್ಯವಾಗುವ ಎಲ್ಲಾ ಸಹಕಾರವನ್ನು ಕೊಡುತ್ತೇನೆ ಎಂದು ಹೇಳಿ ಶುಭ ಹಾರೈಸಿದರು.

ಆಡಳಿತ ಸಮಿತಿಯ ಉಪಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಜೊತೆ ಕಾರ್ಯದರ್ಶಿ ಮುಂಡಾಳಗುತ್ತು ಸುರೇಶ್ ರೈ ಮಾಣಿಪ್ಪಾಡಿಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವಿವೇಕಾನಂದ ವಿದ್ಯಾಸಂಸ್ಥೆಯ ಉಪನ್ಯಾಸಕ ಮನಮೋಹನ್‌ರವರು ಶುಭ ಹಾರೈಸಿದರು. ಗೌರವ ಸಲಹೆಗಾರರಾದ ರಾಜೀವ್ ರೈ ಕೋರಂಗ, ವಿವೇಕಾನಂದ ವಿದ್ಯಾಸಂಸ್ಥೆಯ ಉಪನ್ಯಾಸಕ ಅರುಣ್ ಪ್ರಕಾಶ್ ಉಪಸ್ಥಿತರಿದ್ದರು.


ಆಡಳಿತ ಸಮಿತಿಯ ನೂತನ ಅಧ್ಯಕ್ಷ ರಾಘವ ಗೌಡ ಕೆರೆಮೂಲೆರವರು ಮಾತನಾಡಿ, ಜೈಶಂಕರ್ ರೈ ಬೆದ್ರುಮಾರು ಹಾಗು ಅವರ ತಂಡ ಮಂದಿರದ ಆಡಳಿತವನ್ನು ಬಹಳ ಚೆನ್ನಾಗಿ ನಡೆಸಿಕೊಂಡು ಬಂದಿದ್ದಾರೆ. ನವರಾತ್ರಿಯಿಂದ ಹಿಡಿದು ವರಮಹಾಲಕ್ಷ್ಮೀ ವೃತ ಪೂಜೆಯ ತನಕ ಎಲ್ಲಾ ದೇವತಾ ಕಾರ್ಯಗಳು ಯಶಸ್ವಿಯಾಗಿ ನಡೆದಿದೆ. ಮುಂದಿನ ದಿನಗಳಲ್ಲೂ ಕೂಡ ಶ್ರೀರಾಮಚಂದ್ರ ದೇವರ ಆಶೀರ್ವಾದ ಹಾಗೇ ಭಕ್ತರ ಸಹಕಾರದೊಂದಿಗೆ ಎಲ್ಲಾ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರುತ್ತೇವೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಪ್ರಧಾನ ಕಾರ್ಯದರ್ಶಿ ಯಶೋಧರ ಚೌಟ, ಕೋಶಾಧಿಕಾರಿ ಮುಂಡಾಳಗುತ್ತು ಮೋಹನ ಆಳ್ವರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಸಹಕಾರ ಕೋರಿದರು. ಸಂತೋಷ್ ರೈ ಕೋರಂಗ ಸ್ವಾಗತಿಸಿ, ಯಶೋಧರ ಚೌಟ ವಂದಿಸಿದರು.


ಶ್ರೀರಾಮ ನವಮಿ, ಭಜನೆ, ಅನ್ನಸಂತರ್ಪಣೆ
ಶ್ರೀರಾಮ ನವಮಿಯ ಪ್ರಯುಕ್ತ ಭಜನಾ ಸೇವೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಕೆದಂಬಾಡಿಬೀಡು ದಿ.ಬಾಲಕೃಷ್ಣ ಬಲ್ಲಾಳ್ ಸ್ಮರಣಾರ್ಥ ಕೆದಂಬಾಡಿಬೀಡು ಚಂದ್ರಹಾಸ ಬಲ್ಲಾಳ್ ಹಾಗೂ ಕುಟುಂಬಸ್ಥರಿಂದ ಭಜನಾ ಸೇವೆ ಹಾಗೂ ನವ್ಯತಾ ಮತ್ತು ಸಂತೋಷ್ ಕುಮಾರ್ ರೈ ಕೋರಂಗರವರಿಂದ ಅನ್ನದಾನ ಸೇವೆ ನಡೆಯಿತು.

ಆಡಳಿತ ಸಮಿತಿ ಹಾಗೂ ಭಜನಾ ಸಮಿತಿಯ ಪದಾಧಿಕಾರಿಗಳು
ಆಡಳಿತ ಸಮಿತಿ ಅಧ್ಕಕ್ಷರಾಗಿ ರಾಘವ ಗೌಡ ಕೆರೆಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ಯಶೋಧರ ಚೌಟ ಪಟ್ಟೆತ್ತಡ್ಕ, ಕೋಶಾಧಿಕಾರಿಯಾಗಿ ಮೋಹನ ಆಳ್ವ ಮುಂಡಾಳಗುತ್ತು, ಜತೆ ಕಾರ್ಯದರ್ಶಿಯಾಗಿ ಚಂದ್ರ ನಲಿಕೆ ಇದ್ಪಾಡಿ, ಉಪಾಧ್ಯಕ್ಷರಾಗಿ ಲಿಖಿತ್ ಗೌಡ ಇದ್ಯಪೆ, ಗೌರವ ಸಲಹೆಗಾರರುಗಳಾಗಿ ರಾಜೀವ ರೈ ಕೋರಂಗ, ಕರುಣಾಕರ ರೈ ಅತ್ರೆಜಾಲು, ಶಿವರಾಮ ಗೌಡ ಇದ್ಯಪೆ, ವಿಜಯ ಕುಮಾರ್ ರೈ ಕೋರಂಗ, ಪುಷ್ಪಾವತಿ ಶೀನಪ್ಪ ಗೌಡ ಪಟ್ಲಮೂಲೆ, ಸಮಿತಿ ಸದಸ್ಯರುಗಳಾಗಿ ಜೈಶಂಕರ ರೈ ಬೆದ್ರುಮಾರು, ಐ.ಸಿ ಕೈಲಾಸ್ ಗೌಡ ಇದ್ಯಪೆ, ಸಂತೋಷ್ ಕುಮಾರ್ ರೈ ಕೋರಂಗ, ಮುಂಡಾಳಗುತ್ತು ಸುರೇಶ್ ರೈ ಮಾಣಿಪ್ಪಾಡಿ, ಮುಂಡಾಳಗುತ್ತು ಪ್ರಭಾಕರ ರೈ, ಜನಾರ್ದನ ರೈ ಕೊಡಂಕೀರಿ, ಪದ್ಮನಾಭ ಗೌಡ ಮುಂಡಾಲ, ಪುಷ್ಪಾವತಿ ಕೋಡಿಯಡ್ಕ, ಸುಮನ ಮುಂಡಾಳ, ಸುಂದರ ಪೂಜಾರಿ ಅಜಿಕ್ಕುರಿ, ಕರುಣಾಕರ ರೈ ಕೋರಂಗ, ದಿನಕರ ರೈ ಮಾಣಿಪ್ಪಾಡಿರವರುಗಳು ಆಯ್ಕೆಯಾಗಿದ್ದಾರೆ. ಭಜನಾ ಮಂಡಳಿ ಅಧ್ಯಕ್ಷರಾಗಿ ವಿನೋದ್ ಪೂಜಾರಿ ಕೋಡಿಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ನಿತೀಶ್ ಕುಮಾರ್ ರೈ ಕೋರಂಗ, ಸದಸ್ಯರುಗಳಾಗಿ ಸಾಯಿಪ್ರಸಾದ್ ರೈ ಬೆದ್ರುಮಾರು, ಪ್ರವೀಣ್ ರೈ ಬೋಳೋಡಿ, ವಿನೋದ್ ರೈ ಮುಂಡಾಲ, ರಕ್ಷಿತ್ ಇದ್ಯಪೆ, ರಾಧಾಕೃಷ್ಣ ಪೂಜಾರಿ ಇದ್ಪಾಡಿ, ಕಿರಣ್ ಬೋಳೋಡಿ, ಬಾಲಕೃಷ್ಣ ಚೌಟ ಪಟ್ಟೆತ್ತಡ್ಕ,ಚಂದ್ರ ಸನ್ಯಾಸಿಗುಡ್ಡೆ, ಇಂದಿರಾ ನೇಮಣ್ಣ ಗೌಡ ಇದ್ಯಪೆ, ಕೃಷ್ಣ ಕುಮಾರ್ ಗೌಡ ಇದ್ಯಪೆ, ಬಾಬು ಕೋರಂಗ, ಸತೀಶ್ ಪಟ್ಟೆತ್ತಡ್ಕ, ಸೀತಾರಾಮ ಗೌಡ ಇದ್ಯಪೆ, ಶೀನಪ್ಪ ಗೌಡ ಇದ್ಯಪೆ, ವೀಣಾ ಆರ್ ರೈ ಬೆದ್ರುಮಾರ್, ಸಣ್ಣಣ್ಣ ಗೌಡ ದೋಳ ಸಾರೆಪುಣಿ, ಪುಷ್ಪಾ ಬೋಳೋಡಿ, ಜೈದೀಪ್ ರೈ ಕೋರಂಗ, ಶೇಖರ ಪೂಜಾರಿ ಬಾರಿಕೆ, ಸೌಮ್ಯಮಣಿ ಮಾಣಿಪ್ಪಾಡಿ, ರೇಖಾ ಆರ್.ಕೆ ಕೆರೆಮೂಲೆರವರುಗಳನ್ನು ಆಯ್ಕೆ ಮಾಡಲಾಯಿತು.

ಊರ ಪರವೂರ ಭಕ್ತರ, ದಾನಿಗಳ ಸಹಕಾರದೊಂದಿಗೆ ಶ್ರೀರಾಮ ಮಂದಿರದಲ್ಲಿ ಈಗಾಗಲೇ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದು ಮುಂದಿನ ದಿನಗಳಲ್ಲಿ ಅತೀ ತುರ್ತಾಗಿ ನೂತನ ಪಾಕಶಾಲೆಯ ನಿರ್ಮಾಣ ಕಾರ್ಯ ಮಾಡುವ ಯೋಜನೆ ಇದೆ. ನೂತನ ಸಮಿತಿಗೆ ತಮ್ಮೆಲ್ಲರ ಸಂಪೂರ್ಣ ಸಹಕಾರದೊಂದಿಗೆ ದಾನಿಗಳ, ಭಕ್ತರ ಸಹಕಾರವನ್ನು ಬಯಸುತ್ತೇವೆ.
ರಾಘವ ಗೌಡ ಕೆರೆಮೂಲೆ, ಅಧ್ಯಕ್ಷರು ಆಡಳಿತ ಸಮಿತಿ

LEAVE A REPLY

Please enter your comment!
Please enter your name here