ಪುತ್ತೂರು: ವಿದ್ಯಾಕುಟೀರದಲ್ಲಿ ಸಂಸ್ಕಾರ ಸಂಜೀವಿನೀ ಎಂಬ ಪುಟಾಣಿಗಳ ಶಿಬಿರ ನಡೆಯಿತು.
ಪೋಳ್ಯ ಮಠದ ಅರ್ಚಕ ವೇ.ಬ್ರ. ಸತ್ಯನಾರಾಯಣ ಭಟ್ಟರು ವೇದಮಂತ್ರಗಳ ಪಠಣದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.
ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್, ಬಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕಿ ಶಾರದಾ ಸುಬ್ರಮಣ್ಯ ಭಟ್, ವಿವೇಕ ಬಳಗ-ಪುತ್ತೂರು ಶ್ರೀರಾಮಸ್ತೋತ್ರವನ್ನು ಒಟ್ಟಾಗಿ ಸ್ತುತಿಸುವಂತೆ ಮಾರ್ಗದರ್ಶನ ಮಾಡಿ, ಮಕ್ಕಳ ಮುಂದಿನ ಬಾಳಿಗೆ ಶುಭಾಶಂಸನೆಗೈದರು.

ಈ ಶಿಬಿರದಲ್ಲಿ, 34 ಮಕ್ಕಳು ಭಾಗವಹಿಸಿದ್ದರು. ಸಂಪ್ರತಿಷ್ಠಾನದ ಕಾರ್ಯದರ್ಶಿ ಎಂ. ಎಸ್. ನಾರಾಯಣ ಸ್ವಾಗತಿಸಿದರು. ಸಂಪ್ರತಿಷ್ಠಾನದ ಕೋಶಾಧಿಕಾರಿ ಪಿ. ತಿರುಮಲೇಶ್ವರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಆಡಳಿತ ಮಂಡಳಿ ಸದಸ್ಯರಾದ ಮಿತ್ತೂರು ಶ್ರೀಧರ ಭಟ್ ವಂದಿಸಿದರು.