ಇಂದು(ಎ.15): ಪುತ್ತೂರು ಜಾತ್ರೆಯಲ್ಲಿ ಸುಸ್ವರ ಮೆಲೋಡಿಸ್‌ನಿಂದ ಭಕ್ತಿ ಭಾವ ಗಾನ ಸಂಭ್ರಮ

0

ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಆರನೇ ದಿನದ ಸಂಭ್ರಮದಲ್ಲಿ ಎ.15ರಂದು ಸಂಜೆ 6ಕ್ಕೆ ಪುತ್ತೂರು ನಟರಾಜ ವೇದಿಕೆಯಲ್ಲಿ ಉಪ್ಪಿನಂಗಡಿಯ ಸುಸ್ವರ ಮೆಲೋಡೀಸ್ ತಂಡದವರಿಂದ ಭಕ್ತಿ ಭಾವ ಗಾನ ಸಂಭ್ರಮ ನಡೆಯಲಿದೆ.

ಬಿ.ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು ಸಾರಥ್ಯದಲ್ಲಿ ವೈಶಾಲಿ ಎಂ.ಕುಂದರ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರಾಗಿ ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ವೈಶಾಲಿ ಎಂ.ಕುಂದರ್, ಬಾಲಪ್ರತಿಭೆ ಸ್ಮೃತಿ ಪಲ್ಲತ್ತಾರು, ಮೋಹಿನಿ ಉಪ್ಪಿನಂಗಡಿ, ಉಷಾಲಕ್ಷ್ಮಣ್ ಬೆಳ್ಳಿಪ್ಪಾಡಿ ಸಹಕರಿಸಲಿದ್ದಾರೆ. ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುವಂತೆ ತಂಡದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here