ಪುತ್ತೂರು: ಮೆಸ್ಕಾಂ, ಪುತ್ತೂರು ನಗರ ಹಾಗೂ ಕುಂಬ್ರ ಗ್ರಾಮಾಂತರ ಉಪವಿಭಾಗ ಮಟ್ಟದ ಜನ ಸಂಪರ್ಕ ಸಭೆಯು ಮೆಸ್ಕಾಂ ಪುತ್ತೂರು ನಗರ ಉಪವಿಭಾಗ ಕಚೇರಿಯಲ್ಲಿ ಎ.16ರಂದು ಪೂರ್ವಾಹ್ನ 11:00 ಗಂಟೆಯಿದ ಅಪರಾಹ್ನ 12:00 ಗಂಟೆಯವರೆಗೆ ನಡೆಯಲಿದೆ.
ಮಂಗಳೂರು ವೃತ್ತ ಕಛೇರಿ ಅಧೀಕ್ಷಕ ಇಂಜಿನಿಯರ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.ಗ್ರಾಹಕರು ಪುತ್ತೂರು ನಗರ ಉಪವಿಭಾಗ ಕಚೇರಿಯಲ್ಲಿ ಮತ್ತು ದೂರವಾಣಿ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದು . ಕಛೇರಿ ಸ್ಥಿರ ದೂರವಾಣಿ ಸಂಖ್ಯೆ: 08251 230393 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.