ಅರಿಯಡ್ಕ: ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು-ಅರಿಯಡ್ಕ ಇದರ ವಾಸುದೇವ ಸಭಾಭವನದಲ್ಲಿ ಎ.13ರಂದು 38ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಪುರೋಹಿತರಾದ ಕಾವು ಶಿವಪ್ರಸಾದ ಕಡಮಣ್ಣಾಯ ಇವರ ಪುರೋಹಿತ್ಯದಲ್ಲಿ ನಡೆಯಿತು. ಕಲಶ ಪ್ರತಿಷ್ಠೆ ಸಂಕಲ್ಪ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸತ್ಯನಾರಾಯಣ ಪೂಜೆ, ಮಹಾಪೂಜೆ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.

ಧಾರ್ಮಿಕ ಸಭಾ ಕಾರ್ಯಕ್ರಮ
ಧಾರ್ಮಿಕ ಉಪನ್ಯಾಸ ನೀಡಿದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನ ಗುತ್ತು ಮಾತಾಡಿ, ಧಾರ್ಮಿಕ ಶಿಕ್ಷಣ ನಮ್ಮ ಮನೆಯಿಂದಲೇ ಪ್ರಾರಂಭವಾಗ ಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ದೊರೆತಾಗ, ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರಗಳು ಬೆಳೆಯುತ್ತವೆ. ಯಾವುದೇ ಸಂಘ ಸಂಸ್ಥೆಗಳಲ್ಲಿ ಅಥವಾ ಧಾರ್ಮಿಕ ಕೇಂದ್ರಗಳಲ್ಲಿ ಒತ್ತಾಯ ಪೂರಕವಾಗಿ ಯಾವುದೇ ಹುದ್ದೆಯನ್ನು ನೀಡಬಾರದು. ಯಾರು ಸ್ವ ಇಚ್ಛೆಯಿಂದ ಹುದ್ದೆಯನ್ನು ಪಡೆಯುತ್ತಾನೆಯೋ ಅವನು ಆ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಾನೆ. ಧಾರ್ಮಿಕ ಕ್ಷೇತ್ರಗಳಲ್ಲಿ ನಾವೆಲ್ಲ ಹಿಂದುಗಳು ಎಂಬ ಭಾವನೆ ಎಲ್ಲರಲ್ಲಿಯೂ ಇರಬೇಕು. ಯಾವುದೇ ರಾಜಕೀಯ ಇರಬಾರದು.ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಶ್ರೀ ಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಶ್ರೀ ಕೃಷ್ಣ ಭಜನಾ ಸಂಕೀರ್ಣ ಸಮಿತಿ ಗೌರವಾಧ್ಯಕ್ಷ ಸದಾಶಿವ ಮಣಿಯಾಣಿ ಕುತ್ಯಾಡಿ, ಉಪಸ್ಥಿತರಿದ್ದು ಶುಭ ಹಾರೈಸಿದರು. ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಎ. ರಾಮದಾಸ ರೈ ಮದ್ಲ ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.


ಸನ್ಮಾನ
ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನ ಗುತ್ತು ಮತ್ತು ಇತ್ತೀಚೆಗೆ ನಿವೃತ್ತಿ ಹೊಂದಿದ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಉದ್ಯೋಗಿ ಹಾಗೂ, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರಾಮ ದಾಸ್ ರೈ ಮದ್ಲ ರವರಿಗೆ ಮಂದಿರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಕೃಷ್ಣ ಭಜನಾ ಮಂದಿರದ ವತಿಯಿಂದ ಜನವರಿಯಲ್ಲಿ ನಡೆದ ಅರ್ಧ ಏಕಹಾ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯೋಜಕತ್ವ ವಹಿಸಿರುವ ದಾನಿಗಳನ್ನು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಸಂದರ್ಭದಲ್ಲಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಕಾರ್ಯಕ್ರಮದ ನಂತರ ಯಕ್ಷಗಾನ ಕಲಾವಿದ ಬಾಲಕೃಷ್ಣ ಉಡ್ಡಂಗಳ ಸಾರಥ್ಯದಲ್ಲಿ, ಸುಬ್ರಮಣ್ಯ ಗೌಡ ಪಾಪೆ ಮಜಲು ಮತ್ತು ಚಂದ್ರ ಜಿ ಕುತ್ಯಾಡಿ ಸಹಕಾರದಲ್ಲಿ ಶ್ರೀ ಕೃಷ್ಣ ಕಾರುಣ್ಯ ಯಕ್ಷಗಾನ ಶ್ರೀ ಕೃಷ್ಣ ಕಲಾಸಂಘ ಕೌಡಿಚ್ಚಾರು ಇದರ ವತಿಯಿಂದ ನಡೆಯಿತು.
ಅನ್ನದಾನ
ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತಾದಿಗಳು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಸಮಿತಯ ಜೊತೆ ಕಾರ್ಯ ದರ್ಶಿ ಕೊರಗಪ್ಪ ಗೌಡ ಮಡ್ಯಂಗಳ, ಉಪಾಧ್ಯಕ್ಷರಾದ ಕುಶಾಲಪ್ಪ ಗೌಡ ಮಡ್ಯಂಗಳ, ಮತ್ತು ವಿಶ್ವನಾಥ ರೈ ಕುತ್ಯಾಡಿ, ಗೌರವ ಸಲಹೆಗಾರರಾದ ಡಿ.ಅಮ್ಮಣ್ಣ ರೈ ಪಾಪೆಮಜಲು, ಕುಂಞಿರಾಮ ಮಣಿಯಾಣಿ ಕುತ್ಯಾಡಿ, ಮತ್ತು ಅರ್ಚಕ ಕರುಣಾಕರ ಗೌಡ, ಸಮಿತಿ ಸದಸ್ಯರುಗಳಾದ ಮೋನಪ್ಪ ಕುಲಾಲ್ ಕೌಡಿಚ್ಚಾರು, ಶೇಷಪ್ಪ ನಾಯ್ಕ ಮಾಯಿಲಕೊಚ್ಚಿ, ದಯಾನಂದ ಗೌಡ ಆಕಾಯಿ, ಜಗದೀಶ್ ನಾಯ್ಕ ಬೇಂಗತಡ್ಕ, ಯಕ್ಷಿತಾ ಮರತ್ತಮೂಲೆ, ವೇದಾವತಿ ಹೊಸಗದ್ದೆ, ಸುಶಾಂತ್ ರೈ ಕುತ್ಯಾಡಿ, ಸುಕುಮಾರ ಕರ್ಕೇರ ಮಡ್ಯಂಗಳ, ಸುನಿಲ್ ಪೂಜಾರಿ ಗುಂಡ್ಯಡ್ಕ, ಜನಾರ್ಧನ ಪೂಜಾರಿ ಬಳ್ಳಿಕಾನ, ದರ್ಶನ್ ಪೂಂಜಾ ಗೋಳ್ತಿಲ, ನಾಗೇಶ್ ನಾಯ್ಕ ಗಂಗು ಕುಮೇರು, ವಸಂತ ಕುಮಾರ್ ಕೌಡಿಚ್ಚಾರು, ಭಜನಾ ಸಂಕೀರ್ತನ ಸಮಿತಿ ,ಅಧ್ಯಕ್ಷ ಪೂವಪ್ಪ ನಾಯ್ಕ ಕುತ್ಯಾಡಿ,ಪ್ರ. ಕಾರ್ಯದರ್ಶಿ ಪ್ರತೀಕ್ ಪೂಜಾರಿ ಆಕಾಯಿ, ಕಾರ್ಯದರ್ಶಿ ಚೇತನ್ ಕುಲಾಲ್ ಹೊಸ ಗದ್ದೆ, ಉಪಾಧ್ಯಕ್ಷರಾದ ಅಪ್ಪಯ್ಯ ನಾಯ್ಕ ಬಪ್ಪಪುಂಡೇಲು ಮತ್ತು ಗಂಗಾಧರ ನಾಯ್ಕ ಮಡ್ಯಂಗಳ, ಸಂಘಟನಾ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕುತ್ಯಾಡಿ, ಮಹಿಳಾ ಭಜನಾ ಸಮಿತಿಯ ಗೌರವ್ಯಾಧ್ಯಕ್ಷೆ ಭಾರತಿ ವಸಂತ ಕೌಡಿಚ್ಚಾರು, ಅಧ್ಯಕ್ಷೆ ಸೇಸಮ್ಮ ವಾಸು ಪೂಜಾರಿ ಗುಂಡ್ಯಡ್ಕ,ಪ್ರ. ಕಾರ್ಯದರ್ಶಿ ಹೇಮಲತಾ ಬಳ್ಳಿಕಾನ, ಖಜಾಂಚಿ ದೀಕ್ಷಾ ಏರಮೆ ಮುಂತಾದವರು ಸಹಕರಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯ ಪದ್ಮನಾಭ ಆಚಾರ್ಯ ಪ್ರಾರ್ಥಿಸಿ ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯರ್ಶಿ ದೀಪಕ್ ಕುಲಾಲ್ ಕೌಡಿಚ್ಚಾರು ವಂದಿಸಿದರು.