ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಡಾ.ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಖ್ಯಾತ ಸಂಗೀತ ಸಂಸ್ಥೆ ಗಾನಸಿರಿ ಕಲಾ ಕೇಂದ್ರ (ರಿ)ಪುತ್ತೂರು ಇದರ ಉಪ್ಪಿನಂಗಡಿ ಮತ್ತು ರಾಮಕುಂಜ ಶಾಖೆಗಳ ಜಂಟಿ ವಾರ್ಷಿಕೋತ್ಸವ ನಾದಲಯ ಸಮ್ಮಿಲನ ಉಪ್ಪಿನಂಗಡಿಯ ಶ್ರೀ ಶಕ್ತಿ ಸಭಾಭವನದಲ್ಲಿ ನಡೆಯಿತು. ಉಭಯ ಶಾಖೆಗಳ ಸುಮಾರು 50 ವಿದ್ಯಾರ್ಥಿಗಳು ಸುಮಧುರವಾದ ಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆಗಳನ್ನು ಹಾಡಿ ಮನರಂಜಿಸಿದರು.

ಹಿಮ್ಮೇಳ ಕಲಾವಿದರಾಗಿ ಡಾ. ದಿನೇಶ್ ರಾವ್ ಸುಳ್ಯ, ಸುಹಾಸ್ ಹೆಬ್ಬಾರ್ ಮಣಿಯ ಮತ್ತು ಸುದರ್ಶನ್ ಆಚಾರ್ಯ ಜ್ಯೋತಿಗುಡ್ಡೆ ಸಹಕರಿಸಿದರು. ಡಾ.ಕಿರಣ್ ಕುಮಾರ್ ಗಾನಸಿರಿ ಇವರೊಂದಿಗೆ ಗಾನಸಿರಿ ಪುತ್ತೂರು ಶಾಖೆಯ ವಿದ್ಯಾರ್ಥಿಗಳಾದ ದೀಪ್ತಿ ಪ್ರಭು ಮತ್ತು ಸೃಜನಾ ವಿದ್ಯಾರ್ಥಿಗಳಿಗೆ ಸಹಕರಿಸಿದರು.

ಶಕ್ತಿ ಸಭಾಭವನದ ಮಾಲಕ ಗಣೇಶ್ ಪ್ರಸಾದ್ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ನೆನಪಿನ ಸ್ಮರಣಿಕೆ ನೀಡಿದರು.

ಗಾನಸಿರಿ ಸಂಸ್ಥೆಯ ವಿವಿಧ ಶಾಖೆಗಳಿಗೆ ದಾಖಲಾತಿಗೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9901555893