ಸುದೇಶ್ ಆರ್. ಶೆಟ್ಟಿ ಮಾಲಕತ್ವದ ಅನ್ನಪೂರ್ಣೇಶ್ವರಿ ಸಸ್ಯಾಹಾರಿ ರೆಸ್ಟೋರೆಂಟ್ ಧರ್ಮಸ್ಥಳದಲ್ಲಿ ನವೀಕರಣಗೊಂಡು ಶುಭಾರಂಭ

0

ಬೆಳ್ತಂಗಡಿ: ಧರ್ಮಸ್ಥಳ ಹೊಸ ಬಸ್‌ ನಿಲ್ದಾಣದ ಎದುರುಗಡೆಯ ರಜತಾದ್ರಿ ಡಿ ಬ್ಲಾಕ್‌ನಲ್ಲಿ ಅನ್ನಪೂರ್ಣೇಶ್ವರಿ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ನವೀಕರಣಗೊಂಡು ಎ.23ರಂದು ಶುಭಾರಂಭಗೊಂಡಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ದೀಪ ಪ್ರಜ್ವಲನೆಗೊಳಿಸಿ ಶುಭ ಹಾರೈಸಿದರು. ಉದ್ಯಮಿಗಳಾದ ಸಂಜೀವ ಶೆಟ್ಟಿ ಮೊಡಂಕಾಪು, ಜಯರಾಮ ಶೆಟ್ಟಿ ಉಜಿರೆ, ಅಖಿಲ್ ಕನ್ಯಾಡಿ, ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ರಾಜೇಶ್ ಶೆಟ್ಟಿ ಕೊಂಬೆಟ್ಟು, ದಯಾಕರ ಆಳ್ವ ಸುಳ್ಯ, ಸದಾಶಿವ ರೈ ಬಜ್ಪೆ ಸಹಿತ ಹಲವರು ಭೇಟಿ ನೀಡಿ ಶುಭ ಹಾರೈಸಿದರು.


ಅನ್ನಪೂರ್ಣೇಶ್ವರಿ ಸಸ್ಯಾಹಾರಿ ರೆಸ್ಟೋರೆಂಟ್‌ನ ಮಾಲಕರಾದ ಪುತ್ತೂರು ತಾಲೂಕಿನ ಕೋಡಿಂಬಾಡಿಯ ಶಾಂತಿನಗರ ಶ್ರೀರಾಜ ನಿಲಯದ ನಿವಾಸಿ ಸುದೇಶ್ ಆರ್. ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಸುದೇಶ್ ಶೆಟ್ಟಿ ಅವರ ತಾಯಿ ಗಿರಿಜಾ ಆರ್. ಶೆಟ್ಟಿ, ಪತ್ನಿ ಶ್ರದ್ಧಾ ಎಸ್. ಶೆಟ್ಟಿ, ಮಕ್ಕಳಾದ ಶ್ರೀಶಾ, ಶ್ರೇಷ್ಠ, ಸಹೋದರಿಯರಾದ ಶಾಲಿನಿ ಬಿ. ಶೆಟ್ಟಿ, ಸುಜಾತಾ ಜೆ. ಶೆಟ್ಟಿ, ಹೋಟೆಲ್ ಉದ್ಯಮಿಯಾಗಿರುವ ಸಹೋದರ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here