ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಏ.28ರಂದು ನಡೆಯಲಿರುವ ಪ್ರತಿಷ್ಠಾವರ್ಧಂತಿ ಹಾಗೂ ಮೇ1,2 ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ಗೊನೆ ಮುಹೂರ್ತ ಏ.23 ರಂದು ನಡೆಯಿತು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಒಳತ್ತಡ್ಕ ಜಗನ್ನಾಥ ರೈ,ಮಾಜಿ ಅಧ್ಯಕ್ಷ ಮಹಾಬಲ ರೈ,ಸಮಿತಿ ಸದಸ್ಯರು,ಊರಿನ ಭಕ್ತರು ಉಪಸ್ಥಿತರಿದ್ದರು. ನಂತರ ಜಾತ್ರೋತ್ಸವದ ಬಗ್ಗೆ ಸಭೆ ನಡೆಯಿತು. ಅಧ್ಯಕ್ಷರು ಜಾತ್ರೆಯ ಬಗ್ಗೆ ವಿವರಿಸಿದರು. ಮಹಾಬಲ ರೈಯವರು ಪ್ರಾಸ್ತಾವಿಕ ಮಾಹಿತಿ ನೀಡಿದರು.