ಪುತ್ತೂರು: ಕೋಡಿಂಬಾಡಿ ಗ್ರಾಮದ ವಿನಾಯಕ ನಗರ ನಿವಾಸಿ ಉಗ್ಗಪ್ಪ ಶೆಟ್ಟಿ(90ವ) ಅವರು ಎ.24ರಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದಾಗಿ ನಿಧನರಾದರು.
ಉಪ್ಪಿನಂಗಡಿಯ ಗಾಂಧೀಪಾರ್ಕ್ ನಲ್ಲಿ ಗೋಲಿ ಸೋಡಾ ವ್ಯಾಪಾರದ ಮೂಲಕ ಚಿರಪರಿಚಿತರಾಗಿದ್ದ ಇವರು ವಿನಾಯಕ ನಗರದಲ್ಲಿ ಅಂಗಡಿ ಹೊಂದಿದ್ದರು. ಮೃತರು ಮೂವರು ಪುತ್ರಿಯರು, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.