ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯಕ್ಕೆ ಆಗಮಿಸಿದ ಕಾಶಿ ಮಠಾಧೀಶರಾಗಿದ್ದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕ ಯಾತ್ರೆಯ ಎರಡನೇ ದಿನವಾದ ಶುಕ್ರವಾರ ಮನೆ ಮನೆಗಳಲ್ಲಿ ಪಾದುಕಪೂಜೆ ನಡೆಯಿತು.
ಬಳಿಕ ವ್ಯಾಸೋಪಾಸನೆ- ವಿಷ್ಣು ಸಹಸ್ರ ನಾಮ ಪಠಣ ನಡೆದು ಮಧ್ಯಾಹ್ನ ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಾಲಯದ ಮೊಕ್ತೇಸರಾದ ಕೆ. ಅನಂತರಾಮ ಕಿಣಿ, ಯು. ನಾಗರಾಜ ಭಟ್, ಸಮಾಜ ಬಾಂಧವರಾದ ಎಚ್. ವಾಸುದೇವ ಪ್ರಭು, ಕರಾಯ ರಾಮಚಂದ್ರ ನಾಯಕ್, ಗಣೇಶ ನಾಯಕ್, ಸತೀಶ ನಾಯಕ್, ಎಂ. ಶ್ರೀನಿವಾಸ ಭಟ್, ಎಂ. ಸತ್ಯಪ್ರಸಾದ್ ಭಟ್ ಲಕ್ಷ್ಮೀನಗರ, ಕೆ. ರಾಘವೇಂದ್ರ ಪ್ರಭು, ಕೆ. ರಾಜೇಶ ಪೈ, ನಿತಿನ್ ಪಡಿಮಾರ್, ಕೆ. ವಿನಾಯಕ ಪ್ರಭು, ವಿಕ್ರಮ ಭಟ್, ಶಾಂತರಾಮ ಶೆಣೈ, ಪಿ. ಹರೀಶ ಪೈ, ಕೆ. ದಾಮೋದರ ಪ್ರಭು, ಕೆ. ಹರೀಶ ಕಿಣಿ, ಮಂಜುಳೇಶ ಭಟ್, ಚಂದ್ರಕಾಂತ ಶೆಣೈ, ಅರ್ಚಕರಾದ ರವೀಂದ್ರ ಭಟ್, ವ್ಯವಸ್ಥಾಪಕರಾದ ಕೆ. ರಾಮ ಕೃಷ್ಣ ಪ್ರಭು, ಕೆ. ಮಂಜುನಾಥ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.