ಪಿಯು -ಡಿಗ್ರಿ ವಿದ್ಯಾರ್ಥಿಗಳಿಗೆ ಅವಕಾಶವನ್ನಿತ್ತ ವಿದ್ಯಾಮಾತಾ…
ಪುತ್ತೂರು: ಪದವಿಪೂರ್ವ ಅಥವಾ ಪದವಿ ಶಿಕ್ಷಣ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಟರ್ನಿಂಗ್ ಪಾಯಿಂಟ್ ಎನ್ನಬಹುದು. ಶಿಕ್ಷಣ ಪಡೆಯುವುದರ ಜೊತೆಗೆ ಉದ್ಯೋಗ ಕೌಶಲ್ಯತೆಗಳನ್ನು ರೂಡಿಸಿಕೊಳ್ಳುವುದು ಈಗಿನ ಯುವ ಪೀಳಿಗೆಯ ಟ್ರೆಂಡ್ ಅಂದರೆ ತಪ್ಪಲ್ಲ.
ಪಿಯುಸಿ ಅಥವಾ ಡಿಗ್ರಿ ಸಂಪೂರ್ಣ ಮುಗಿಯಲಿ ಎಂದು ಕಾಯದೇ, ಓದುತ್ತಿರು ವಾಗಲೇ ವೃತ್ತಿಪರ ಫೌಂಡೇಶನ್ ಕೋರ್ಸ್‌ಗಳ ಮೂಲಕ, ಮುಂದಿನ ಜೀವನಕ್ಕೆ ಆಧಾರಸ್ತಂಭವಾಗುವಂತಹ ಉದ್ಯೋಗಗಳನ್ನು ಭವಿಷ್ಯದ ರತ್ನಗಳು ಪಡೆದುಕೊಳ್ಳಬಹುದಾಗಿದೆ. ಪ್ರಾಕ್ಟಿಕಲ್ ಅಕೌಂಟಿಂಗ್, ಗ್ರಾಫಿಕ್ ಡಿಸೈನ್, ಡಿಜಿಟಲ್ ಮಾರ್ಕೆಟಿಂಗ್, ಎ.ಐ ಕೋರ್ಸ್ ಗಳು ಈಗಂತೂ ಅತ್ಯಂತ ಟ್ರೆಂಡಿಂಗ್ ನಲ್ಲಿರುವ ಕೋರ್ಸುಗಳಾಗಿ ಬಿಟ್ಟಿವೆ.
ಇವೆಲ್ಲಾ ಅವಕಾಶವನ್ನು ಸರಿಯಾದ ರೀತಿ ವಿನಿಯೋಗಿಸಿಕೊಳ್ಳುವಂತೆ, ಪುತ್ತೂರಿನ ಹೆಸರಾಂತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಉದ್ಯೋಗ ಕೌಶಲ್ಯ ತರಬೇತಿ ಸಂಸ್ಥೆಯಾಗಿರುವ, ಸುಳ್ಯದಲ್ಲೂ ಕಾರ್ಯಾಚರಿಸುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಈ ನಿಟ್ಟಿನಲ್ಲಿ ಮಹತ್ತರವಾದ ಹೆಜ್ಜೆಯನ್ನಿಟ್ಟು, ಪಿಯುಸಿ/ ಡಿಗ್ರಿ ಓದುತ್ತಿರುವ ಅಥವಾ ಓದು ಮುಗಿಸಿರುವ ವಿದ್ಯಾರ್ಥಿಗಳಿಗಾಗಿ ವಾರದ ಮತ್ತು ವಾರಾಂತ್ಯದ ತರಗತಿಗಳನ್ನು ಪ್ರಾರಂಭಿಸಿದೆ. ಪ್ರಸ್ತುತ ಅತ್ಯಂತ ಸುಧಾರಿತ ಡಿಪ್ಲೊಮಾ ಇನ್ ಅಕೌಂಟಿಂಗ್ ಆಂಡ್ ಟ್ಯಾಕ್ಸೇಷನ್ ಕೋರ್ಸ್‌ಗಳು, ಡಿಪ್ಲೊಮಾ ಇನ್ ಗ್ರಾಫಿಕ್ ಡಿಸೈನ್, ವಿ ಎಫ್ ಎಕ್ಸ್ , ಎಸ್‌ಎಪಿ -ಫಿಕೋ, ಎಐ ಡಿಜಿಟಲ್ ಮಾರ್ಕೆಟಿಂಗ್ ವಿಷಯಗಳನ್ನು ಪುತ್ತೂರು ಮತ್ತು ಸುಳ್ಯದಲ್ಲಿ ಹೊಸತನದೊಂದಿಗೆ ಪರಿಚಯಿಸಲು ಅಕಾಡೆಮಿ ಮುಂದಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮೂಲಕ ಸರಕಾರಿ ಉದ್ಯೋಗ ಪಡೆಯಲು ಕಾರಣವಾದ ವಿದ್ಯಾಮಾತಾ ಅಕಾಡೆಮಿಯು ಖಾಸಗಿ ವಲಯದಲ್ಲಿನ ವಿವಿಧ ಕ್ಷೇತ್ರದ ಕಂಪನಿಗಳಿಗೆ ನೇರ ವಿಶೇಷ ಸಂದರ್ಶನಗಳನ್ನು ಕಳೆದ ಎಂಟು ವರ್ಷಗಳಿಂದ ನಡೆಸುತ್ತಾ ಬಂದಿದೆ. ಸಾವಿರಾರು ಅಭ್ಯರ್ಥಿಗಳಿಗೆ ಮಂಗಳೂರು, ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಉದ್ಯೋಗ ಸಿಗುವಲ್ಲೂ ಶ್ರಮಿಸಿದೆ. ಇದೀಗ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಪ್ರತಿ ಅಭ್ಯರ್ಥಿಗೂ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ವಿವಿಧ ಕಂಪನಿಗಳೊಂದಿಗೆ ಒಡಂಬಡಿಕೆಯನ್ನೂ ಅಕಾಡೆಮಿ ಮಾಡಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಅತೀ ಕಡಿಮೆ ವೆಚ್ಚದಲ್ಲಿ ತರಬೇತಿ ನೀಡುತ್ತಿದ್ದೇವೆ…
ಸದ್ಯ ಪಿಯು ಮುಗಿಸಿ ರಜೆಯಲ್ಲಿರುವ ಅಥವಾ ಪಿಯುಸಿ /ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳು ನಾವು ಪ್ರಾರಂಭಿಸಿರುವ ಕೋರ್ಸ್ ಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯಾಮಾತಾ ಅಕಾಡೆಮಿಯು ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತಿದೆ. ನಮ್ಮಲ್ಲಿರುವ ಕೋರ್ಸ್‌ಗಳು ಬೇರೆ ಮಹಾನಗರಗಳಲ್ಲಿ ಪಡೆಯಬೇಕೆಂದರೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ.

ಭಾಗ್ಯೇಶ್ ರೈ
ಆಡಳಿತ ನಿರ್ದೇಶಕರು