





ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಕಾಶಿ ಮಠಾಧೀಶರಾಗಿದ್ದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಅಂಗವಾಗಿ ಶುಕ್ರವಾರ ರಾತ್ರಿ ಶ್ರೀ ಗುರು ನೃತ್ಯರೂಪಕ ಸೇವೆ ಹಾಗೂ ದೇವಾಲಯದ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆದು, ರಾತ್ರಿ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಆಡಳಿತ ಮೋಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೆಸರಾದ ಕೆ.ಅನಂತರಾಯ ಕಿಣಿ, ಯು.ನಾಗರಾಜ ಭಟ್, ಡಾ. ಎಂ. ಆರ್.ಶೆಣೈ, ಪಿ.ದೇವದಾಸ ಭಟ್, ಸಮಾಜ ಬಾಂಧವರಾದ ಕರಾಯ ಗಣೇಶ ನಾಯಕ್, ಎನ್.ಸುರೇಶ ಪೈ, ಕೆ.ದಾಮೋದರ ಪ್ರಭು, ಎಚ್.ವಾಸುದೇವ ಪ್ರಭು, ಅಚ್ಚುತ ಪಡಿಯಾರ್, ನರಸಿಂಹ ಪಡಿಯಾರ್, ಶ್ರೀನಿವಾಸ ಪಡಿಯಾರ್, ಕೆ.ಮಹೇಶ ಕಿಣಿ, ಕೆ.ಗಿರಿಧರ್ ನಾಯಕ್, ಪಾಣೆಮಂಗಳೂರು ಹರೀಶ ಪೈ, ಯು.ರಾಜೇಶ ಪೈ, ಕೆ.ರಾಘವೇಂದ್ರ ನಾಯಕ್, ವ್ಯವಸ್ಥಾಪಕರಾದ ಕೆ.ರಾಮಕೃಷ್ಣ ಪ್ರಭು ಕೆ, ಮಂಜುನಾಥ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.












