ಈಶ್ವರಮಂಗಲದಲ್ಲಿ ಪ್ರಿನ್ಸೆಸ್ ಬ್ಯೂಟಿಪಾರ್ಲರ್ ಶುಭಾರಂಭ

0

ಪುತ್ತೂರು: ಪ್ರಿನ್ಸೆಸ್ ಬ್ಯೂಟಿಪಾರ್ಲರ್ ಈಶ್ವರಮಂಗಲ ಟಿ.ಎ ಕಾಂಪ್ಲೆಕ್ಸ್‌ನಲ್ಲಿ ಎ.28ರಂದು ಶುಭಾರಂಭಗೊಂಡಿತು. ಪುತ್ತೂರು ಐಶ್ವರ್ಯ ಹರ್ಬಲ್ ಬ್ಯೂಟಿ ಪಾರ್ಲರ್‌ನ ಐಶ್ವರ್ಯ ಚಂದ್ರಶೇಖರ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.ನಿಡ್ಪಳ್ಳಿ ಚರ್ಚ್‌ನ ಫಾದರ್ ಜೇಸನ್ ಲೋಬೋ ಆಶೀರ್ವಚನ ನೀಡಿದರು.


ಅತಿಥಿಗಳಾಗಿ ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಈಶ್ವರಮಂಗಲ ಟಿ.ಎ ಕಾಂಪ್ಲೆಕ್ಸ್‌ನ ಮಾಲಕ ಅಬ್ದುಲ್ ಖಾದರ್ ಹಾಜಿ ಉಪಸ್ಥಿತರಿದ್ದರು. ಪ್ರಿನ್ಸೆಸ್ ಬ್ಯೂಟಿಪಾರ್ಲರ್‌ನ ಮಾಲಕಿ ಅನ್ಸಿಲ್ಲಾ ಅನಿಲ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here