ಶ್ರೀ ಪ್ರಗತಿ ವಿಸ್ತಾರ ಕಾಲೇಜ್‌ ಫಾರ್‌ ಏವಿಯೇಶನ್‌ ಆ್ಯಂಡ್ ಮ್ಯಾನೇಜ್ಮೆಂಟ್‌ – ಮೇ.2ರಿಂದ 3ನೇ ಬ್ಯಾಚ್‌ ಆರಂಭ

0

ಪುತ್ತೂರು: ಏವಿಯೇಶನ್‌ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಕಾತುರರಾಗಿರುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವನ್ನು ಕಲ್ಪಿಸಿರುವ ಬೆಂಗಳೂರಿನ ಪ್ರತಿಷ್ಠಿತ ಸ್ಕೈ ಬರ್ಡ್‌ ಏವಿಯೇಶನ್‌ ಸಂಸ್ಥೆಯ ಪ್ರಾಂಚೈಸಿ ಸಂಸ್ಥೆಯಾಗಿರುವ ಪುತ್ತೂರಿನ ಶ್ರೀ ಪ್ರಗತಿ ವಿಸ್ತಾರ ಕಾಲೇಜ್‌ ಫಾರ್‌ ಏವಿಯೇಶನ್‌ ಆ್ಯಂಡ್ ಮ್ಯಾನೇಜ್ಮೆಂಟ್‌ ಇದರ ವಿದ್ಯಾರ್ಥಿಗಳ 3ನೇ ಬ್ಯಾಚ್‌ ತರಗತಿಗಳು ಮೇ.2ರಿಂದ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪಿ ವಿ ಗೋಕುಲ್‌ ನಾಥ್‌ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತವರ ಪೋಷಕರ ಆಸಕ್ತಿ, ಉತ್ಸಾಹ ಹಾಗೂ ಸ್ಪಂದನೆಯ ಕಾರಣ 3ನೇ ಬ್ಯಾಚ್‌ ಭರ್ತಿಯಾಗಿದ್ದು, ಈ ಹಿಂದಿನ 2 ಬ್ಯಾಚ್‌ ಗಳೂ ಕೂಡ ಯಶಸ್ವಿಯಾಗಿ ಮುಂದುವರಿದಿದೆ.

2025-26ನೇ ಶೈಕ್ಷಣಿಕ ಸಾಲಿನ ಏವಿಯೇಶನ್‌ ಪದವಿ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದ್ದು, ವಿದ್ಯಾರ್ಥಿಗಳಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಸದ್ಯ ಸಂಸ್ಥೆಯಲ್ಲಿ 8 ತಿಂಗಳ ಅಂತರಾಷ್ಟ್ರೀಯ ಗಗನಸಖಿ/ಕ್ಯಾಬಿನ್‌ ಕ್ರೂವ್ ತರಬೇತಿ, ಎರ್‌ ಲೈನ್‌ ಮತ್ತು ಏರ್ ಪೋರ್ಟ್‌ ಆಪರೇಷನ್ಸ್‌ ನಲ್ಲಿ 1 ವರ್ಷದ ಅಂತರಾಷ್ಟ್ರೀಯ ಡಿಪ್ಲೋಮ, 1 ವರ್ಷದ ಅಂತರಾಷ್ಟ್ರೀಯ ಏವಿಯೇಶನ್‌ , ಆತಿಥ್ಯ ಮತ್ತು ಟ್ರಾನ್ಸ್‌ ಪೋರ್ಟ್‌ ಮ್ಯಾನೇಜ್ಮೆಂಟ್‌ ಡಿಪ್ಲೋಮ, ಏರ್‌ ಪೋರ್ಟ್‌ ಗ್ರೌಂಡ್‌ ಹ್ಯಾಂಡ್ಲಿಂಗ್‌ ನಲ್ಲಿ 6 ತಿಂಗಳ ಅಂತರಾಷ್ಟ್ರೀಯ ಡಿಪ್ಲೋಮ, 5 ತಿಂಗಳ ಅವಧಿಯ ಐಎಟಿಎ ಫೌಂಡೇಷನ್‌ ಕೋರ್ಸ್‌, 3 ವರ್ಷಗಳ ಬಿಬಿಎ ಏವಿಯೇಶನ್‌ ಮ್ಯಾನೇಜ್ಮೆಂಟ್‌ ಪದವಿ, 2 ವರ್ಷಗಳ ಎಂಬಿಎ ಏವಿಯೇಶನ್‌ ಮ್ಯಾನೇಜ್ಮೆಂಟ್‌ ಪದವಿ ಲಭ್ಯವಿದೆ.

ಸೀಮಿತ ಸೀಟುಗಳು ಲಭ್ಯವಿದ್ದು, ಆಸಕ್ತ ವಿದ್ಯಾರ್ಥಿಗಳು ತಡ ಮಾಡದೆ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸುವಂತೆ ಸಂಸ್ಥೆಯೂ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here