ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಗ್ರಾಮ ಸಮಿತಿ ಪೆರಾಬೆ ಕುಂತೂರು ಇದರ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಏ.20 ರಂದು ಶ್ರೀ ರಕ್ತೇಶ್ವರಿ ದೈವಸ್ಥಾನ ವಠಾರ ಮಾಯಿಲ್ಗ ಇಲ್ಲಿ ಸಂಘದ ಅಧ್ಯಕ್ಷರಾದ ಹರ್ಷಿತ್ ಮಾಯಿಲ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕು ಬಿಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ ಗೆಣಸಿನ ಕುಮೇರು, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಸಹ ಕಾರ್ಯದರ್ಶಿ ದಯಾನಂದ ಕರ್ಕೇರ ಮಡ್ಯೊಟ್ಟುರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೌರವಾಧ್ಯಕ್ಷ ರವಿ ಮಾಯಿಲ್ಗ ಮಹಿಳಾ ಘಟಕ ದ ಅಧ್ಯಕ್ಷೆ ಸೌಮ್ಯ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮಾಜಿ ಪದಾಧಿಕಾರಿಗಳು,ಕೋಟಿ ಚೆನ್ನಯ್ಯ ಮಿತ್ರವೃಂದ ಅಲಂಕಾರಿನ ಮಾಜಿ ಅಧ್ಯಕ್ಷರಾದ ಜಯಂತ ನೆಕ್ಕಿಲಾಡಿ, ಯುವವಾಹಿನಿ ಮಾಜಿ ಅಧ್ಯಕ್ಷರಾದ ಯೋಗೀಶ್ ಆಗತ್ತಾಡಿ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಅನಿಲ್ ಕುಮಾರ್ ಊರ್‌ಸಾಗು ಸ್ವಾಗತಿಸಿದರು. ಉಪಾಧ್ಯಕ್ಷರಾದ ಉದಯಕುಮಾರ್ ಎಣ್ಣೆತೋಡಿ ವಾರ್ಷಿಕ ವರದಿಯನ್ನು ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ಗ್ರಾಮದ ಸುಮಾರು 35 ವಿದ್ಯಾರ್ಥಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯನ್ನು ಮಾಡಲಾಯಿತು. 2025 ರಿಂದ 2028ರ ಮುಂದಿನ 3 ವರ್ಷದ ಅವಧಿಗೆ ನೂತನ ಸಮಿತಿಯನ್ನು ರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಉದಯಕುಮಾರ್ ಎನ್ನುತ್ತೋಡಿ, ಉಪ ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಊರುಸಾಗು ಕಾರ್ಯದರ್ಶಿಯಾಗಿ ಸುದೀಪ್ ಸುವರ್ಣ ಮಾಯಿಲ್ಗ, ಸಹಕಾರ್ಯದರ್ಶಿ ವಿನಯ ಕೆದಿಲ, ಕೋಶಾಧಿಕಾರಿಯಾಗಿ ನಿತೇಶ್ ನಡ್ಡೋಟ್ಟು ರನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಹರ್ಷಿತ್ ಮಾಯಿಲ್ಗ ರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಘಟಕದ ಅಧ್ಯಕ್ಷೆಯಾಗಿ ಉಷಾ ರವಿ ಮಾಯಿಲ್ಗ, ಕಾರ್ಯದರ್ಶಿ ಪ್ರಜನಿ ಕೆದಿಲರನ್ನು ಆಯ್ಕೆ ಮಾಡಲಾಯಿತು.