ನಾಳೆ (ಮೇ.2) ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟ

0

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸಿದ್ದ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ -1ರ ಫ‌ಲಿತಾಂಶ ಮೇ. 2 ಶುಕ್ರವಾರ ಪ್ರಕಟವಾಗಲಿದೆ.

ಶುಕ್ರವಾರ ಬೆಳಗ್ಗೆ 11.30ಕ್ಕೆ ಶಾಲಾ ಶಿಕ್ಷಣ ಸಚಿವರು ಸುದ್ದಿಗೋಷ್ಠಿ ನಡೆಸಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಿದ್ದಾರೆ. ಫಲಿತಾಂಶವನ್ನು karresults.nic.in ವೆಬ್‌ ಸೈಟ್‌ ನಲ್ಲಿ ಮಧ್ಯಾಹ್ನ 12.30ರ ಬಳಿಕ ನೋಡಬಹುದು.

ಮಾ. 21ರಿಂದ ಎ.4ರ ವರೆಗೆ ಪರೀಕ್ಷೆ ನಡೆದಿತ್ತು.

ಆನ್‌ಲೈನ್‌ ಮೂಲಕ ಫಲಿತಾಂಶ ಪಡೆಯುವುದು ಹೇಗೆ?

  1. ಅಧಿಕೃತ ವೆಬ್‌ಸೈಟ್‌ಗಳುhttps://karresults.nic.in/ ಅಥವಾ kseab.karnataka.gov.in ಗೆ ಲಾಗಿನ್ ಮಾಡಿ.
  2. ‘SSLC ಫಲಿತಾಂಶ 2025’ ಲಿಂಕ್‌ ಅನ್ನು ಕ್ಲಿಕ್ ಮಾಡಿ.
  3. ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ ಮತ್ತು ಸಬ್‌ಮಿಟ್ ಬಟನ್ ಒತ್ತಿ.
  4. ತಕ್ಷಣವೇ ನಿಮ್ಮ ವಿಷಯವಾರು ಅಂಕಗಳು ಸ್ಕ್ರೀನ್‌ ಮೇಲೆ ಪ್ರದರ್ಶನಗೊಳ್ಳುತ್ತದೆ.
  5. ಫಲಿತಾಂಶವನ್ನು ಡೌನ್‌ಲೋಡ್‌ ಅಥವಾ ಪ್ರಿಂಟ್ ಮಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here