ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಿಂದ ಮತ್ತೊಂದು ಹೆಜ್ಜೆ

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಪ್ಯಾರಾಮೆಡಿಕಲ್ ಮತ್ತು ಎಲೈಡ್ ಹೆಲ್ತ್ ಸಯನ್ಸ್ ಕೋರ್ಸ್‌ಗಳು, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ಮತ್ತು ಆಪರೇಶನ್ ಥಿಯೇಟರ್ ಟೆಕ್ನಾಲಜಿ ಕೋರ್ಸ್‌ಗಳು ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಬಹುಬೇಡಿಕೆ ಇರುವ ಈ ಕೋರ್ಸ್‌ಗಳು ಅತ್ಯುತ್ತಮ ಗುಣಮಟ್ಟದೊಂದಿಗೆ ನೀಡಲಾಗುತ್ತದೆ. ಆರಂಭದಲ್ಲಿ ಎಲ್‌ಟಿ ಮತ್ತು ಓಟಿ ವಿಭಾಗಗಳು ಕಾರ್ಯಾಚರಿಸಲಿದ್ದು ಮುಸ್ಲಿಂ ವಿದ್ಯಾರ್ಥಿಯರಿಗೆ ಶರೀಅತ್ ತರಗತಿಗಳು ಕೂಡ ಇದರೊಂದಿಗೆ ಲಭ್ಯವಾಗಲಿದೆ.

ಅಲ್ಲದೆ ಆರೋಗ್ಯಕ್ಕೆ ಸಂಬಂದಪಟ್ಟ ನಿರಂತರ ಸೆಮಿನಾರ್‌ಗಳು, ಸ್ಪೆಷಲ್ ಕ್ಲಾಸ್‌ಗಳೂ ದೊರೆಯಲಿದ್ದು ಜೀವನದ ಅತ್ಯಂತ ಅಪಾಯದ ಘಟ್ಟಗಳಲ್ಲಿ ಸಂರಕ್ಷಿಸುವ ಸ್ಪೆಷಲ್ ಸ್ಕಿಲ್‌ಗಳು, ದೇಹವನ್ನು ರೋಗಗಳು ಬರದಂದೆ ತಡೆಯುವ ಐಡಿಯೋಲಜಿಗಳನ್ನು ಕಲಿಸಿಕೊಡಲಾಗುವುದು. ಕಳೆದ ಇಪ್ಪತೈದು ವರ್ಷಗಳಿಂದ ಪರಿಣಾಮಕಾರಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿಶ್ವ ವಿಖ್ಯಾತ ಜಾಮಿಅ ಮರ್ಕಝ್ ಇದರ ಅಧೀನ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿದ್ದು ಪ್ರಸಿದ್ದ ಮರ್ಕಝ್ ನಾಲೇಜ್ ಸಿಟಿಯ ಯುನಾನಿ ಮೆಡಿಕಲ್ ಮಹಾವಿದ್ಯಾಲಯ, ಆಯುರ್ವೇದ ಕಾಲೇಜು ಸಹಿತ ವೈದ್ಯಕೀಯ ಸೇವೆಯ ವಿವಿಧ ವಿಭಾಗಗಳು ಜನಪ್ರಿಯವಾಗಿ ಕಾರ್ಯಾಚರಿಸುತ್ತಿದೆ.

ಇದೀಗ ಕೆಲವೇ ಸೀಟ್‌ಗಳು ಮಾತ್ರ ಬಾಕಿಯಿದ್ದು ಆಸಕ್ತ ವಿದ್ಯಾರ್ಥಿನಿಯರು ಸಂಸ್ಥೆಯನ್ನು ಸಂಪರ್ಕಿಸುವಂತೆ ಮೀಡಿಯಾ ಮರ್ಕಝ್ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here