ಸವಣೂರು: ಸವಣೂರು ಗ್ರಾಮದ ಆರೇಲ್ತಡಿ ಉಳ್ಳಾಕ್ಲು, ಕೆಡೆಂಜೋಡಿತ್ತಾಯ ದೈವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಟೆ ,ಬ್ರಹ್ಮಕಲಶ- ನೇಮೋತ್ಸವವು ಮೇ.12 ರಿಂದ ಮೇ.15ರವರೆಗೆ ಬ್ರಹ್ಮ ಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು ,ಇದರ ಆಮಂತ್ರಣ ಬಿಡುಗಡೆ ಎ.30ರಂದು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದಲ್ಲಿ ಪವಿತ್ರಪಾಣಿ ರತ್ನಾಕರ ಕುಂಜತ್ತಾಯ ಹಾಗೂ ಅರ್ಚಕರಾದ ಪದ್ಮನಾಭ ಕುಂಜತ್ತಾಯ ಅವರು ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಕಿನಾರ,ಅಧ್ಯಕ್ಷ ದಿನೇಶ್ ಮೆದು,ಉಪಾಧ್ಯಕ್ಷರಾದ ವಾಸುದೇವ ಇಡ್ಯಾಡಿ, ಮೋನಪ್ಪ ಗೌಡ ಆರೇಲ್ತಡಿ, ಚಂದಪ್ಪ ಪೂಜಾರಿ ಊರುಸಾಗು,ಹರಿಶ್ಚಂದ್ರ ಕಾಯರ್ಗ, ಕೋಶಾಧಿಕಾರಿ ರಾಜೇಶ್ ಇಡ್ಯಾಡಿ,ಗೌರವ ಸಲಹೆಗಾರರಾದ ರಾಕೇಶ್ ರೈ ಕೆಡೆಂಜಿ, ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು,ತಾರಾನಾಥ ಕಾಯರ್ಗ,ನಳಿನ್ ಕುಮಾರ್ ,ಸದಸ್ಯರಾದ ನಾರಾಯಣ ಗೌಡ ಪೂವ,ಪರಮೇಶ್ವರ ಮಡಿವಾಳ, ವಿಶ್ವನಾಥ ಪೂಜಾರಿ ಏರ್ತಿಲ,ಗಂಗಾಧರ ಪೆರಿಯಡ್ಕ, ತೀರ್ಥರಾಮ ಕೆಡೆಂಜಿ,ವೆಂಕಟೇಶ ಇಡ್ಯಾಡಿ,ಜಗದೀಶ್ ಇಡ್ಯಾಡಿ, ಗಣೇಶ್ ನಾಯ್ಕ ಕೆಡೆಂಜಿ,ಪ್ರಭಾಕರ ಶೆಟ್ಟಿ ನಡುಬೈಲು,ಕೃಷ್ಣ ಭಟ್ ಕುಕ್ಕುಜೆ,ಮೋನಪ್ಪ ಗೌಡ ಇಡ್ಯಾಡಿ,ಪರಮೇಶ್ವರ ಇಡ್ಯಾಡಿ,ಯೋಗೀಶ್ ಇಡ್ಯಾಡಿ,ಸುರೇಶ್ ,ಪ್ರಕಾಶ್ ಕುದ್ಮನಮಜಲು,ಚಂದ್ರಶೇಖರ ಮೆದು,ದಯಾನಂದ ಮೆದು ಮೊದಲಾದವರಿದ್ದರು.