ನೆಲ್ಯಾಡಿ-ಕೊಕ್ಕಡ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ – ಜೂ.15ರ ತನಕ ವಾಹನ ಸಂಚಾರಕ್ಕೆ ನಿರ್ಬಂಧ

0

ನೆಲ್ಯಾಡಿ: ನೆಲ್ಯಾಡಿಯಿಂದ ಕೊಕ್ಕಡ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಪುತ್ಯೆ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಸದ್ರಿ ರಸ್ತೆಯಲ್ಲಿ ಮೇ.1ರಿಂದ ಜೂನ್ 15ರ ತನಕ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ನೆಲ್ಯಾಡಿ ಪೇಟೆಯಿಂದ ಕೊಕ್ಕಡ ಕಡೆಗೆ ಬರುವ ಹಾಗೂ ಹೋಗುವ ವಾಹನಗಳು ಪರ್ಯಾಯ ಮಾರ್ಗವಾಗಿ ಪಡ್ಡಡ್ಕ-ನೆಲ್ಯಾಡಿ ಮಾರ್ಗದಲ್ಲಿ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಕಾಮಗಾರಿ ನಿರ್ವಹಣೆಗೆ ಸಹಕರಿಸಬೇಕೆಂದು ಲೋಕೋಪಯೋಗಿ ಇಲಾಖೆ ಪುತ್ತೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here