ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ, ಹೊಸಮಜಲು ಝಂ ಝಂ ಹೋಟೆಲ್ ಮಾಲಕ ಮಹಮ್ಮದ್(59 ವ.)ರವರು ಅನಾರೋಗ್ಯದಿಂದ ಮೇ.1ರಂದು ಸ್ವಗೃಹದಲ್ಲಿ ನಿಧನರಾದರು.
ಮಹಮ್ಮದ್ ಅವರು ಹಲವು ವರ್ಷಗಳಿಂದ ಹೊಸಮಜಲುನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಜೊತೆಗೆ ಕಲ್ಲಂಗಡಿ ಮಾರಾಟ, ಅನುಪಯುಕ್ತ ಅಡಿಕೆ ಮರಗಳ ಖರೀದಿ, ಮಾರಾಟ ಸೇರಿದಂತೆ ಇತರೇ ವ್ಯವಹಾರವನ್ನೂ ಮಾಡುತ್ತಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ನ ಹೊಸಮಜಲು ಯುನಿಟ್ನ ಸದಸ್ಯರಾಗಿದ್ದರು. ಕಳೆದ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೋಟೆಲ್ ಉದ್ಯಮ ಬಿಟ್ಟು ಮನೆಯಲ್ಲೇ ಇದ್ದರು. ಹೊಸಮಜಲು ಭಾಗದಲ್ಲಿ ಹಲವು ವರ್ಷ ಸುದ್ದಿ ಬಿಡುಗಡೆ ಪತ್ರಿಕೆ ಏಜೆಂಟರಾಗಿದ್ದು ಪತ್ರಿಕೆ ವಿತರಣೆ ಮಾಡುತ್ತಿದ್ದರು. ಮೃತರು ಪತ್ನಿ ಐಸಮ್ಮ, ಪುತ್ರ ಅತಾವುಲ್ಲಾ, 10 ಮಂದಿ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.