ಪುತ್ತೂರು: 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಪುತ್ತೂರಿನ ಪಡ್ಡಾಯೂರಿನ ಉಮೇಶ ಗೌಡ ಮೂವಪ್ಪು ಮತ್ತು ವಾರಿಜಾ ದಂಪತಿಯವರ ಪುತ್ರಿ ಮಾನ್ಯಳನ್ನು ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಪುತ್ತೂರು ನಗರಮಂಡಲ ಹಾಗೂ ಪಡ್ಡಾಯೂರು ಬೂತ್ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಭಾ.ಜ.ಪ ದ ನಗರಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಮತ್ತು ನಗರಮಂಡಲ ಯುವಮೋರ್ಚಾ ಅಧ್ಯಕ್ಷ ನಿತೇಶ್ ಕಲ್ಲೇಗ ಹಾಗೂ ಬೂತ್ ಅಧ್ಯಕ್ಷ ವೈಷ್ಣವ್ ನೆಲಪಾಲ್ ಅಭಿನಂದಿಸಿದರು. ಜೊತೆಗೆ ನಗರ ಮಂಡಲ ಪದಾಧಿಕಾರಿಗಳಾದ ಮಣಿಕಂಠ,ನಾಗೇಂದ್ರ ಬಾಳಿಗ ,ಯುವಮೋರ್ಚಾ ಕಾರ್ಯದರ್ಶಿ ಪ್ರಜ್ವಲ್,ಜಯಾನಂದ ಪಡ್ಡಾಯೂರು ದಿನೇಶ್,ಸುರೇಶ್ ಆನಂದ ಗೌಡ ಮೂವಪ್ಪು,ನಿರಂಜನ್ ಮತ್ತು ಮಹಿಳಾ ಮೋರ್ಚಾದ ವಿಮಲ ಉಪಸ್ಥಿತರಿದ್ದರು.