ಕಡಬ: ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆದ 2024-25ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಕುಂತೂರು ವಿದ್ಯಾನಗರ ಮಾರ್ ಇವಾನಿಯೋಸ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ ಎಲ್ಲಾ 8 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇ.100 ಫಲಿತಾಂಶ ಬಂದಿದೆ. 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಧನ್ವಿ ಬಿ.612, ಪಾವನಿ 607, ಆಯಿಷಾ ಸೈಝಾ ಕೆ. 602, ಫಾತಿಮತ್ ಶಮಿನಾಝ್ 598, ಅಂಕಿತ 591, ಪೂಜಾ 542, ಯಸ್ಮಿತಾ 472, ದುರ್ಗಾಶ್ರೀ 447 ಅಂಕ ಪಡೆದುಕೊಂಡಿದ್ದಾರೆ.