ಪುತ್ತೂರು: ಇತ್ತೀಚೆಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೆಹರುನಗರದ ಸುದಾನ ವಸತಿಯುತ ಪ್ರೌಢಶಾಲೆಗೆ ಶೇ.98.17 ಫಲಿತಾಂಶ ಲಭಿಸಿದೆ. ಶಾಲೆಯು ‘ಎ’ ಗ್ರೇಡ್(ಕೆ.ಎಸ್.ಇ.ಎ.ಬಿ) ಪಡೆದುಕೊಂಡಿದೆ ಮಾತ್ರವಲ್ಲ ರಾಜ್ಯದಲ್ಲಿ ಐದು ರ್ಯಾಂಕ್ ಗಳನ್ನು ಸಂಸ್ಥೆಯು ಗಳಿಸಿಕೊಂಡಿದೆ.
ಈ ಬಾರಿ ಬಾಲಕರು 64, ಬಾಲಕಿಯರು 45 ಹೀಗೆ ಒಟ್ಟು 109 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಕರಾಗಿದ್ದು, ಬಾಲಕರು 6, ಬಾಲಕಿಯರು 17 ಮಂದಿ 600ರ ಮೇಲೆ ಅಂಕಗಳನ್ನು ಗಳಿಸಿಕೊಂಡಿದ್ದಾರೆ. ಒಟ್ಟು 61 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 42 ಮಂದಿ ಪ್ರಥಮ ಶ್ರೇಣಿಯಲ್ಲಿ, 4 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಶಾಲೆಯ ಟಾಪ್ ಸ್ಕೋರರ್ ಗಳಾದ ಆರ್ ಧರ್ಶನಾಶ್ರೀರವರು 620 ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ, ರಾಜ್ಯದಲ್ಲಿ ಆರನೇ ರ್ಯಾಂಕ್, ಅನಘಾ ವಿ.ರವರು 618 ಅಂಕಗಳೊಂದಿಗೆ ಶಾಲೆಯಲ್ಲಿ ದ್ವಿತೀಯ, ರಾಜ್ಯದಲ್ಲಿ ಎಂಟನೇ ರ್ಯಾಂಕ್, ಅನಿಶ್ ಎಲ್.ರೈಯವರು 618 ಅಂಕಗಳೊಂದಿಗೆ ಶಾಲೆಯಲ್ಲಿ ದ್ವಿತೀಯ, ರಾಜ್ಯದಲ್ಲಿ ಎಂಟನೇ ರ್ಯಾಂಕ್, ಆಕಾಶ್ ಪಿ.ರವರು 617 ಅಂಕ ಪಡೆದು ಶಾಲೆಯಲ್ಲಿ ತೃತೀಯ, ರಾಜ್ಯದಲ್ಲಿ ಒಂಭತ್ತನೇ ರ್ಯಾಂಕ್, ಜಿ.ಧನ್ವಿಕಾರವರು 616 ಅಂಕ ಪಡೆದು ಶಾಲೆಯಲ್ಲಿ ನಾಲ್ಕನೇ ಸ್ಥಾನ, ರಾಜ್ಯದಲ್ಲಿ ಹತ್ತನೇ ರ್ಯಾಂಕ್ ಗಳಿಸಿರುತ್ತಾರೆ. ಈಶಾನ್ವಿ ಪಿ.ರವರು 615 ಅಂಕ, ಫಾತಿಮತ್ ರಿಮ್ಸಾ 615 ಅಂಕ, ಮೊಹಮ್ಮದ್ ಸ್ವಾಲಹ್ 615 ಅಂಕಗಳನ್ನು ಗಳಿಸಿಕೊಂಡಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.