ನಿವೃತ್ತ ಡಿವೈಎಸ್‌ಪಿ ಮುಂಡಾಳಗುತ್ತು ಯಜಮಾನ ಶಾಂತಾರಾಮ ರೈಯವರಿಗೆ ಸನ್ಮಾನ

0


ಶಾಂತಾರಾಮ ರೈಯವರಿಂದ ಸಮಾಜಕ್ಕೆ ಬಹುದೊಡ್ಡ ಕೊಡುಗೆ- ಅರಿಯಡ್ಕ ಚಿಕ್ಕಪ್ಪ ನಾೖಕ್‌

ಪುತ್ತೂರು: ಕೆದಂಬಾಡಿ ಗ್ರಾಮದ ಕೋಡಿಯಡ್ಕ ಮಾಡ ಶ್ರೀ ನಾಗಬ್ರಹ್ಮ ದೈವಸ್ಥಾನ-ಶ್ರೀ ಶಿರಾಡಿ ದೈವಸ್ಥಾನದ ನೇಮೋತ್ಸವದ ಸಂದರ್ಭದಲ್ಲಿ ಮೇ.3ರಂದು ದೈವಸ್ಥಾನದ ವತಿಯಿಂದ ನಿವೃತ್ತ ಡಿವೈಎಸ್‌ಪಿ ಮುಂಡಾಳಗುತ್ತು ಯಜಮಾನ ಶಾಂತಾರಾಮ ರೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾೖಕ್‌ ರವರು ಮುಂಡಾಳಗುತ್ತು ಶಾಂತಾರಾಮ ರೈಯವರನ್ನು ಸನ್ಮಾನಿಸಿ, ಮಾತನಾಡಿ ಶಾಂತಾರಾಮ ರೈಯವರು ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯಾಗಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ.

ಶಾಂತಾರಾಮ ರೈಯವರು ಮುಂಡಾಳಗುತ್ತು ಯಜಮಾನರಾಗಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದು ಹೇಳಿದರು. ಮುಂಡಾಳಗುತ್ತು ಶಾಂತಾರಾಮ ರೈಯವರ ಪತ್ನಿ ಮಾಕೂರು ಶುಭವತಿರವರು ಉಪಸ್ಥಿತರಿದರು. ಡಿಂಬ್ರಿಗುತ್ತು ಉಮೇಶ್ ರೈರವರು ಅರಿಯಡ್ಕ ಚಿಕ್ಕಪ್ಪ ನಾೖಕ್‌ ರವರನ್ನು ಶಾಲು ಹೊದಿಸಿ, ಗೌರವಿಸಿದರು. ಮುಂಡಾಳಗುತ್ತು ಸುರೇಂದ್ರ ರೈ, ಮುಂಡಾಳಗುತ್ತು ಕುಮುದಾ ಲಕ್ಷ್ಮೀನಾರಾಯಣ ಶೆಟ್ಟಿ, ಕರುಣಾಕರ ರೈ ಅತ್ರೆಜಾಲು, ವಿಜಯ ರಾಮಕೃಷ್ಣ ಅಡ್ಯಂತಾಯ, ಕೃಷ್ಣಿ ಮೋಹನ್ ರೈ ಉಪ್ಪಿನಂಗಡಿ, ಮುಂಡಾಳಗುತ್ತು ಡಾ.ಮಂಜುನಾಥ ರೈ, ಮುಂಡಾಳಗುತ್ತು ವಿನೋದ್ ಕುಮಾರ್ ರೈ, ಮಾಧವ ರೈ ಆರಂತನಡ್ಕ, ಸುಧಾಕರ್ ರೈ ಕೈಕಾರ, ಮುಂಡಾಳಗುತ್ತು ಸುಜಯ ವಿ.ರೈ ಪಾಲ್ತಾಡು, ಮುಂಡಾಳಗುತ್ತು ಸುಹಾಸಿನಿ ಕೃಷ್ಣ ರೈ , ಶ್ಯಾಮ್ ಸುಂದರ್ ರೈ ಕೊಪ್ಪಳ, ಸುಚೇತ್ ರೈ, ಸುದೇಶ್ ರೈ, ಸಬಿತಾ ಭಂಡಾರಿ, ಶಿವರಾಮ ಗೌಡ ಇದ್ಯಾಪೆ ಸಹಿತ ಅನೇಕ ಮಂದಿ ಭಾಗವಹಿಸಿದರು. ಮುಂಡಾಳಗುತ್ತು ಸುಧಾಕರ್ ರೈ ಸ್ವಾಗತಿಸಿ, ಸನ್ಮಾನ ಪತ್ರ ವಾಚಿಸಿದರು. ಮುಂಡಾಳಗುತ್ತು ಪ್ರಭಾಕರ್ ರೈ ಕಾರ‍್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here