ಪುತ್ತೂರು: ಇತ್ತೀಚೆಗೆ ನಡೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಮರ್ವಿನ್ ವಿಶಾಲ್ ಸಿಕ್ವೇರಾರವರು 611 ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿರುತ್ತಾರೆ.
ಮರ್ವಿನ್ ವಿಶಾಲ್ ಸಿಕ್ವೇರಾರವರು ಇಂಗ್ಲಿಷ್ 119, ಕನ್ನಡಕ್ಕೆ 100, ಹಿಂದಿ 100, ಗಣಿತ 97, ವಿಜ್ಞಾನ 95, ಸಮಾಜ ವಿಜ್ಞಾನ 100 ಅಂಕಗಳನ್ನು ಪಡೆದಿರುತ್ತಾರೆ. ಇವರು ಬಲ್ನಾಡು ನಿವಾಸಿ, ವಿನ್ಸೆಂಟ್ ಸಿಕ್ವೇರಾ ಹಾಗೂ ರೇಶ್ಮಾ ಮರೀನಾ ಪಿಂಟೊರವರ ಪುತ್ರ.