ಉಪ್ಪಿನಂಗಡಿ: ಇಲ್ಲಿನ ಹೃದಯಭಾಗದಲ್ಲಿರುವ ಬುರ್ಜುಮಾನ್ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಮೇ.4ರಂದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬೆಳೆಯುತ್ತಿರುವ ಉಪ್ಪಿನಂಗಡಿ ಪಟ್ಟಣಕ್ಕೆ ಇಂಥ ಶಾಪಿಂಗ್ ಕಾಂಪ್ಲೆಕ್ಸ್ಗಳ ಅಗತ್ಯತೆ ಇದೆ ಎಂದು ಶುಭ ಹಾರೈಸಿದರಲ್ಲದೆ, ಉಪ್ಪಿನಂಗಡಿ ಪಟ್ಟಣದ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ಬಂದ ಸರಕಾರದ ಅನುದಾನಗಳ ಬಗ್ಗೆ ಪ್ರಸ್ತಾಪಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಹನೀಫ್ ಖಾನ್ ಕೋಡಾಜೆ, ಡಾ. ರಾಜಾರಾಮ್ರವರು ಮಾತನಾಡಿ ಶುಭ ಕೋರಿದರು.
ಸಮಾರಂಭದಲ್ಲಿ ಬುರ್ಜುಮಾನ್ ಶಾಪಿಂಗ್ ಕಾಂಪ್ಲೆಕ್ಸ್ನ ಮಾಲಕರಾದ ಮಹಮ್ಮದ್ ಮುಸ್ತಫಾ ಮೂಡಬಿದ್ರೆ ಮತ್ತು ನಝೀಮುದ್ದೀನ್, ಡಾ. ನಝೀರ್ ಮೂಡಬಿದ್ರೆ, ಪ್ರಮುಖರಾದ ಚಂದ್ರಹಾಸ ಶೆಟ್ಟಿ, ಮಹಮ್ಮದ್ ಬಡಗನ್ನೂರು, ಮುಹಮ್ಮದ್ ಹಾಜಿ ನೆಕ್ಕಿಲಾಡಿ, ಚಂದ್ರಶೇಖರ್ ಮೂಡಬಿದ್ರೆ, ರಕ್ಷಿತ್ ಶಿವರಾಂ, ಪ್ರಸನ್ನ ಕುಮಾರ್ ಸಿಝ್ಲರ್, ಮಹಮ್ಮದ್ ಎಂ.ಎಸ್., ತೌಸೀಫ್ ಯು.ಟಿ., ಮುರಳೀಧರ್ ರೈ, ಅಶ್ರಫ್ ಬಸ್ತಿಕ್ಕಾರ್, ವಿನ್ಸೆಂಟ್ ಫೆರ್ನಾಂಡಿಸ್, ನಝೀರ್ ಮಠ, ವಿದ್ಯಾಲಕ್ಮೀ ಪ್ರಭು, ರಶೀದ್ ಮಠ, ಜಲೀಲ್ ಮುಕ್ರಿ, ಹಾರೂನ್ ಅಗ್ನಾಡಿ, ಶುಕೂರ್ ಶುಕ್ರಿಯಾ, ಫಾರೂಕ್ ಪೆರ್ನೆ, ಹಾಫೀಲ್ ಕೂರ್ನಡ್ಕ, ಫಾರೂಕ್ ಬಯಾಬೆ, ಅಶ್ರಫ್, ಬಶೀರ್ ಪರ್ಲಡ್ಕ, ಮಹಮ್ಮದ್ ಕೆಂಪಿ ಉಪಸ್ಥಿತರಿದ್ದರು.
ಎ. ಎಸ್. ಮೆಂಟೆನೆನ್ಸ್ನ ಶಬೀರ್ ಕೆಂಪಿ ಸ್ವಾಗತಿಸಿದರು. ಆಚಿನ ಇಬ್ರಾಹಿಂ ವಂದಿಸಿದರು. ಇರ್ಷಾದ್ ಯು.ಟಿ. ಕಾರ್ಯಕ್ರಮ ನಿರೂಪಿಸಿದರು.