ಪುತ್ತೂರು: ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ನಲ್ಲಿ ಮೇ.೬ರಂದು ಲಲಿತಾ ಸಹಸ್ರನಾಮ ಪಠಣದೊಂದಿಗೆ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು.
ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕ ಮಾತನಾಡಿ ಬಂಗಾರ ಎಂದರೆ ಕಾಲಾತೀತ ಆಡಳಿತಾತೀತವಾಗಿದೆ. ಯಾವತ್ತೂ ಮೌಲ್ಯವಿರುವ ಲೋಹ ಬಂಗಾರವಾಗಿದೆ. ಲಕ್ಷ್ಮಿ, ಸರಸ್ವತಿ, ದುರ್ಗಾದೇವಿಯ ಸ್ವರೂಪ ಒಟ್ಟಿಗೆ ಇರುವುದು ಶ್ರೀದೇವಿ ಲಲಿತೆ. ಇವತ್ತು ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ ಆಯೋಜಿಸಿದ್ದೇವೆ. ಧಾರ್ಮಿಕ ವಿಚಾರಗಳನ್ನು ಹಂಚಿಕೊಳ್ಳಲು ಇಂತಹ ಕಾರ್ಯಕ್ರಮ ಪೂರಕವಾಗಿದೆ ಎಂದರು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಅರ್ಚಕ ಉದಯ ಭಟ್ ದೀಪ ಪ್ರಜ್ವಲಿಸಿ ಕುಂಕುಮಾರ್ಚನೆ ಕಾರ್ಯಕ್ರಮ ನಡೆಸಿಕೊಟ್ಟರು. ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ನ ಆಡಳಿತ ವರ್ಗ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.