ಬಡಗನ್ನೂರು: ಪಟ್ಟೆ ಪ್ರತಿಭಾ ಪ್ರೌಢ ಶಾಲೆಯ 2024-25ನೇ ಸಾಲಿನ ಹತ್ತನೆಯ ತರಗತಿಯ ಸಾರ್ವತ್ರಿಕ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮಾತೃ ಸಂಸ್ಥೆ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ವತಿಯಿಂದ ಅಭಿನಂದನಾ ಕಾರ್ಯಕ್ರಮವು ಮೇ.7ರಂದು ಶ್ರೀ ಕೖಷ್ಣ ಹಿ.ಪ್ರಾ.ಶಾಲಾ ಸಭಾಭವನಧಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಟ್ಟೆ ವಿದ್ಯಾ ಸಂಸ್ಥೆಗಳ ಇದರ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹಾಗೂ ಅಭ್ಯಾಗತರು ಸೇರಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಅತಿಥಿಗಳಾಗಿ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ನಿರ್ದೇಶಕ ಗಣರಾಜ ಕುಂಬ್ಳೆ ಮಾತವಾಡಿ, ಪಟ್ಟೆ ಪ್ರತಿಭಾ ಅಭಿನಂದನೆ ಇದು ಒಂದು ಆತ್ಮೀಯ ಕಾರ್ಯಕ್ರಮ. ಪಟ್ಟೆ ಪರಿಸರದ ಮಕ್ಕಳ ಮತ್ತು ಪೋಷಕರ ಸಂಬಂಧ ಆಪ್ತಕರ, ಮಕ್ಕಳು ಗುರುಹಿರಿಯರನ್ನು ಪೂಜ್ಯನೀಯ ಭಾವನಿಯರಾಗಿರುವುದೇ ಗುರುಗಳಿಗೆ ನೀಡುವ ಗುರುದಕ್ಷಿಣೆ. ಮುಂದೆ ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಪದವಿ ಗಳಿಸಿದರೆ ಆದರಿಂದ ಸಂಸ್ಥೆಗೆ ಹೆಸರು ಎಂದ ಅವರು ಮುಂದೆ ಜೀವನದಲ್ಲಿ ಸುಸಂಸ್ಕೃತರಾಗಿ ದೇಶದ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಹೇಳಿ ಶುಭ ಹಾರೖೆಸಿದರು.
ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಏ.13ರಂದು ವಿದ್ಯಾ ಸಂಸ್ಥೆಗಳ ಚುಕ್ಕಾಣಿ ಪಡೆಯುವ ಸಂದರ್ಭ ಪ್ರಥಮವಾಗಿ ಶಿಕ್ಷಕರ ಹೇಳಿದ ಮಾತು ಎಸ್ ಎಸ್ ಎಲ್ ಸಿಯಲ್ಲಿ ನೂರು ಫಲಿತಾಂಶದ ಬರಬಹುದೇ? ಎಂಬುದಾಗಿತ್ತು. ಆ ಬಳಿಕದ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಒತ್ತು ನೀಡಲಾಯಿತು. ನಮ್ಮ ಶಿಕ್ಷಕರು ಕೊಟ್ಟ ಮಾತು ಚಾಚು ತಪ್ಪದೇ ಮಾಡಿದ್ದಾರೆ. ಇಂದಿನ ಫಲಿತಾಂಶ ವಿಭಿನ್ನವಾಗಿರಲಿ, ಮುಂದೆ ಸಾಮಾನ್ಯ, ಮುಂದೆ 600ಕ್ಕಿಂತ ಹೆಚ್ಚು ಮತ್ತು ರ್ಯಾಂಕ್ ಗಳಿಸುವ ಬಗ್ಗೆ ಗಮನಹರಿಸಬೇಕು. ಸುಸಂಸ್ಕ್ಲತ ಸಮಾಜ ನಿರ್ಮಾಣ ನಿಟ್ಟಿನಲ್ಲಿ ಸಂಸ್ಥೆ ಶಿಕ್ಷಣ ಜತೆಗೆ ಇತರ ಚಟುವಟಿಗಕೆಗಳನ್ನು ಮಾಡಲು ಬದ್ಧವಾಗಿದೆ. ಮಂದ ಸುಸಜ್ಜಿತ ಅಂಗ್ಲ ಮಾಧ್ಯಮ ಶಾಲೆ ಪ್ರಾರಂಭಗೊಳ್ಳಿದೆ. ಊರಿನವರ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.
ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ಬಿ ಮಾತನಾಡಿ, ಆಡಳಿತ ಮಂಡಳಿ, ಶಿಕ್ಷಕರ ವೃಂದ, ಪೋಷಕರು ಮತ್ತು ಮಕ್ಕಳ ಉತ್ಸಾಹದಿಂದ ನೂರು ಶೇಕಾಡ ಫಲಿತಾಂಶ ಬರಲು ಕಾರಣವಾಗಿದೆ ಎಂದು ಹೇಳಿದರು.
ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ಮಾತನಾಡಿ ಮಕ್ಕಳು ಶಾಲೆಗೆ ಅಲಿಸಲಾಗದ ಕೊಡುಗೆ ನೀಡಿದ್ದು ನಮಗೆ ಬಹಳಷ್ಟು ಸಂತೋಷ ತಂದಿದೆ. ಶಿಕ್ಷಕರು ಆಮೂಲ್ಯವಾದ ಸಮಯವನ್ನು ಮಕ್ಕಳೊಂದಿಗೆ ಕಳೆಯುತ ಮಕ್ಕಳ ಶ್ರೇಯಸಿಗೆ ಶ್ರಮಿಸಿದ್ದಾರೆ. ಮಕ್ಕಳು ಸಕರಾತ್ಮಕ ಚಿಂತನೆ ಮೂಲಕ ತಮ್ಮ ಜೀವನ ನಡೆಸಿ ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೖೆಸಿದರು.
ಪ್ರತಿಭಾ ಪ್ರೌಢಶಾಲಾ ಪೋಷಕ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ ಸಂದರ್ಭೋಚಿತ ಮಾತನಾಡಿದರು. ವಿದ್ಯಾ ಸಂಸ್ಥೆಗಳ ಸಂಚಾಲಕ ವಿಶ್ವೇಶ್ ಹಿರಣ್ಯ ಪ್ರಾರಂಭ ಪಾಕಿಸ್ತಾದ ಮೇಲಿನ ಪ್ರತಿಕಾರ ತಿರಿಸಿದ ಭಾರತ ಯೋಧರಿಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಸಾರ್ವತ್ರಿಕ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಸಾಧಕರಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಪ್ರತಿಭಾ ಪ್ರೌಢಶಾಲಾ ಸಹ ಶಿಕ್ಷಕರಾದ ಭವಿತಾ ವಂದಿಸಿ, ವಿಶ್ವನಾಥ ಗೌಡ ಬೊಳ್ಳಾಡಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೖಂದದವರು ಸಹಕರಿಸಿದರು.
ಸನ್ಮಾನ
ಪಟ್ಟೆ ಪ್ರತಿಭಾ ಪ್ರೌಢ ಶಾಲೆಯ 2024-25ನೇ ಸಾಲಿನ ಹತ್ತನೆಯ ತರಗತಿಯ ಸಾರ್ವತ್ರಿಕ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಸಾಧಕ ವಿದ್ಯಾರ್ಥಿಗಳಿಗೆ ಷೋಷಕರ ಸಮುಖದಲ್ಲಿ ಅಭಿನಂದಿಸಲಾಯಿತು.
ಶಿಕ್ಷಕ ವೖಂದವರಿಗೆ ಅಭಿನಂದನೆ
ಸಂಸ್ಥೆಗೆ ನೂರು ಫಲಿತಾಂಶ ಕಾರಣೀಭೂತರಾದ ಶಾಲಾ ಶಿಕ್ಷಕ ವೖಂದವರನ್ನು ಶಾಲು ಹೊದಿಸಿ ಗಿಫ್ಟ್ ನೀಡಿ ಅಭಿನಂದಿಸಲಾಯಿತು.