ತಿಂಗಳಾಡಿ ಬೊಲ್ಪುಗುಡ್ಡೆ: ಕಿದೆವೂರು ಬಾರಿಕೆ ತರವಾಡು ಪುನರ್‌ಪ್ರತಿಷ್ಠಾ ಮಹೋತ್ಸವ ಆರಂಭ- ಹೊರೆ ಕಾಣಿಕೆ ಸಮರ್ಪಣೆ, ತಂತ್ರಿವರ್ಯರ ಆಗಮನ

0

ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಬಳಿಯ ಕನ್ನಡಮೂಲೆ ಬೊಲ್ಪುಗುಡ್ಡೆಯಲ್ಲಿ  ಪುನರುತ್ಥಾನಗೊಂಡಿರುವ ಕಿದೆವೂರು ಬಾರಿಕೆ ತರವಾಡಿನ ಪುನರ್ ಪ್ರತಿಷ್ಠಾ ಮಹೋತ್ಸವ ಮೇ 9ರಿಂದ 11ರವರೆಗೆ ತಂತ್ರಿವರ್ಯರಾದ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಾಲಯದ ಧರ್ಮದರ್ಶಿಗಳಾದ ಶ್ರೀಕೃಷ್ಣ ಗುರೂಜಿ ಅವರ ನೇತೃತ್ವದಲ್ಲಿ ನಡೆಯಲಿದ್ದು ಮೇ.9ರಂದು ಬೆಳಗ್ಗೆ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಸಂಜೆ ತಂತ್ರಿವರ್ಯರ ಆಗಮನದೊಂದಿಗೆ ನಾಗ ಸಾನಿಧ್ಯದಲ್ಲಿ ಸ್ಥಳ ಶುದ್ಧಿ, ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ,  ಆಶ್ಲೇಷ  ಬಲಿ ಪೂಜೆ, ಧ್ಯಾನಾಧಿವಾಸ, ಕಲಶಾಧಿವಾಸ ನಡೆಯಿತು.

ಮೇ.10ರಂದು ಬೆಳಗ್ಗೆ  ಗಣಪತಿ ಹೋಮ, ಕಲಶ ಪ್ರತಿಷ್ಠೆ, ಕಲಶಾದಿ ಪೂಜೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಯ ಬಳಿಕ ಒದಗುವ ವೃಷಭ ಲಗ್ನ ಶುಭ ಮುಹೂರ್ತದಲ್ಲಿ  ಶ್ರೀ ನಾಗಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ 11.47ರ ಬಳಿಕ ಒದಗುವ ಕರ್ಕಾಟಕ ಲಗ್ನ ಶುಭ ಮುಹೂರ್ತದಲ್ಲಿ ಕಲಶಾಭಿಷೇಕ, ನಾಗತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಧೂಮಾವತಿ ಸಾನಿಧ್ಯ ಮತ್ತು ತರವಾಡು ಮನೆಯಲ್ಲಿ  ಸ್ಥಳ ಶುದ್ಧಿ, ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ,  ವಾಸ್ತು ಬಲಿ, ಧ್ಯಾನಾಧಿವಾಸ, ಕಲಶಾಧಿವಾಸ ನಡೆಯಲಿದೆ. ಮೇ 11ರಂದು ಬೆಳಿಗ್ಗೆ  ಗಣಪತಿ ಹೋಮ, ಕಲಶ ಪ್ರತಿಷ್ಠೆ, ಕಲಶಾದಿ ಪೂಜೆಗಳು ನಡೆಯುತ್ತವೆ. ಬೆಳಿಗ್ಗೆ  7.18ರ ಬಳಿಕ ಒದಗುವ ವೃಷಭ ಲಗ್ನ ಶುಭ ಮುಹೂರ್ತದಲ್ಲಿ  ತರವಾಡು ಮನೆಯ ಗೃಹಪ್ರವೇಶ, ಧರ್ಮದೈವ ಧೂಮಾವತಿ, ಕುಪ್ಪೆ ಪಂಜುರ್ಲಿ-ಕಲ್ಲುರ್ಟಿ, ವರ್ಣರ ಪಂಜುರ್ಲಿ, ಕೊರತಿ, ಕಲ್ಲಾಲ್ದ ಗುಳಿಗ, ಮೂಕಾಂಬಿ ಗುಳಿಗ ದೈವಗಳ ಪುನರ್ ಪ್ರತಿಷ್ಠೆ ನಡೆಯಲಿದೆ.  ಬೆಳಿಗ್ಗೆ 8.26ರ ಬಳಿಕ ಒದಗುವ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ  ಕಲಶಾಭಿಷೇಕ, ದೈವಗಳಿಗೆ ತಂಬಿಲ ನಡೆದು  ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ಕಿದೆವೂರು ಬಾರಿಕೆ ತರವಾಡು ಕುಟುಂಬಸ್ಥರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here