ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು, ಶ್ರೀ ವಜ್ರಮಾತಾ ಮಹಿಳಾ ಘಟಕ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದೌರ್ಜನ್ಯದ ಬಗ್ಗೆ ಮಾಹಿತಿ ಕಾರ್ಯಾಗಾರ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಲಯನ್ ಕೋಶಾಧಿಕಾರಿ ಲಯನ್ ಸುಧಾಕರ್ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಸವಿತಾ ಪಿ.ಎಸ್.ಐ.ಮಹಿಳಾ ಪೋಲೀಸ್ ಠಾಣೆ ಪುತ್ತೂರು ಇವರು ಆಗಮಿಸಿ ಸೈಬರ್ ವಂಚನೆಯ ಬಗ್ಗೆ ಮಹಿಳೆಯರು ಹೇಗೆ ಜಾಗೃತಿ ವಹಿಸಬೇಕು ಮತ್ತು ದೌರ್ಜನ್ಯ ದಿಂದ ಹೇಗೆ ಜಾಗರುಕರಾಗಿರಬೇಕು ಎಂದು ಸುಧೀರ್ಘ ಮಾಹಿತಿ ನೀಡಿದರು.
ಅಧ್ಯಕ್ಷ ಸ್ಥಾನವನ್ನು ಲಯನ್ ಪ್ರೇಮಲತಾ ರಾವ್ ಅಧ್ಯಕ್ಷರು ಲಯನ್ಸ್ ಕ್ಲಬ್ ಪುತ್ತೂರು ಇವರು ವಹಿಸಿ ಇಂದಿನ ಸುಧಾರಿತ ಫೋನ್ ನಲ್ಲಿ ಎಷ್ಟು ಒಳ್ಳೆಯದಿದೆಯೋ ಅಷ್ಟೇ ದುಷ್ಪರಿಣಾಮಗಳು ಇದೆ ಎಂದು ಅದರ ಬಗ್ಗೆ ಮಾತಾಡಿದರು. ವಜ್ರಮಾತಾ ಮಹಿಳಾ ಘಟಕದ ಅಧ್ಯಕ್ಷೆ ಲಯನ್ ನಯನ ರೈ ಎಲ್ಲರಿಗೂ ವಂದಿಸಿದರು. Ln.Dc. ಆನಂದ ರೈ, Ln.Dc ಜಯಶ್ರೀ ಶೆಟ್ಟಿ ಉಪಸ್ಥಿತರಿದ್ದರು.