ಪುತ್ತೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ವಿಟ್ಲ ಶಾಖಾ ಸಲಹಾ ಸಮಿತಿಯಲ್ಲಿ 22 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಶಾಖಾ ಗೌರವ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಎಚ್ ರಮಾನಂದ ಶೆಟ್ಟಿ ಕೂಡೂರುಗುತ್ತು ಅವರಿಗೆ ಅಭಿನಂದನ ಕಾರ್ಯಕ್ರಮ ವಿಟ್ಲ ಕಚೇರಿಯಲ್ಲಿ ನಡೆಯಿತು.
ವಿಟ್ಲ ಶಾಖೆಯ ಉಸ್ತುವಾರಿ ನಿರ್ದೇಶಕ ಹಾಗೂ ಸಲಹ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಾಖಾ ಸಲಹ ಸಮಿತಿ ಸದಸ್ಯರಾದ ಡಾ.ಶರಶ್ಚಂದ್ರ ಶೆಟ್ಟಿ ಇರ್ಮಾದಿಗುತ್ತು, ಬಾಲಕೃಷ್ಣ ರೈ, ತಿಮ್ಮಪ್ಪ ಶೆಟ್ಟಿ, ಮುರಳೀಧರ ರೈ, ಕೃಷ್ಣ ಭಟ್, ದಿನಕರ ಆಳ್ವ, ಭಾಸ್ಕರ ರೈ ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಸಲಹಾ ಸಮಿತಿ ಸದಸ್ಯ ಭಾಸ್ಕರ ರೈ ವಂದಿಸಿದರು