ಟೋಟಲ್ ಎನರ್ಜಿಸ್ ನಿಂದ ಎಲ್ಪಿಜಿ ಗ್ರಾಹಕರಿಗೆ ಬೇಸಿಗೆ ಆಫರ್
ಪುತ್ತೂರು : ಅಟೋ , ಕಾರು ಸಹಿತ ಇನ್ನೂ ಹಲವಾರು ಮಾದರಿಯ ಎಲ್ ಪಿ ಜಿ ವಾಹನಗಳಿಗೆ ಪರಿಸರ ಸ್ನೇಹಿ ನೈಸರ್ಗಿಕ ಅನಿಲಗಳ ತಯಾರಿಕೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಹೆಸರಾಂತ ಟೋಟಲ್ ಎನರ್ಜಿಸ್ ಇದರ ಅಧಿಕೃತ ಡೀಲರ್ , ಸುಮಾರು 18 ವರ್ಷಗಳಿಂದ ಗ್ರಾಹಕ ಜನತೆಯ ಸೇವೆಯಲ್ಲಿರುವ ಜೊತೆಗೆ ಹೆಚ್ಚು ವಿಶ್ವಾಸಾರ್ಹ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಇಲ್ಲಿನ ನೆಹರುನಗರದಲ್ಲಿ ಕಾರ್ಯಚರಿಸುತ್ತಿರುವ ಕೊಂಕಣ್ ಗ್ಯಾಸ್ ಸ್ಟೇಷನ್ ಹಾಗೂ ಗ್ರಾಹಕ ಜನತೆಯ ಹೆಚ್ಚಿನ ಅನುಕೂಲಕ್ಕಾಗಿ ಇಲ್ಲಿನ ದರ್ಬೆ ಶಾಖೆ ಬೈಪಾಸ್ ವೃತ್ತ ಬಳಿಯಲ್ಲೂ ಕಳೆದ ಆರು ವರ್ಷಗಳಿಂದ ಸೇವೆ ನೀಡುತ್ತಿರುವ ಕೊಂಕಣ್ ಗ್ಯಾಸ್ ಸ್ಟೇಷನ್ ನಲ್ಲಿ ಮೆಚ್ಚಿನ ಗ್ರಾಹಕರಿಗಾಗಿ ಬೇಸಿಗೆಯ ವಿಶೇಷ ಕೊಡುಗೆಯನ್ನು ಇದೀಗ ಆಯೋಜನೆ ಮಾಡಿದೆ.
ಆಟೋ ಸಹಿತ ಎಲ್ಲಾ ಬಗೆಯ ಗ್ಯಾಸ್ ಫಿಟ್ಟೆಡ್ ವಾಹನಗಳಿಗಾಗಿ ವಿಶೇಷ ಕೊಡುಗೆ ಘೋಷಣೆಯಾಗಿದ್ದು ,ಗ್ರಾಹಕರು ತಮ್ಮ ವಾಹನಕ್ಕೆ ತುಂಬಿಸುವ ಎಲ್ ಪಿ ಜಿ ಗೆ ಪಾಯಿಂಟ್ಸ್ ಮೂಲಕ ಈ ಉಡುಗೊರೆಯನ್ನು ನೀಡಲು ಮುಂದಾಗಿರುವಂತಹ ಸಂಸ್ಥೆ , ಪ್ರತಿ 100 ರೂಪಾಯಿ ಎಲ್ ಪಿ ಜಿ ಯನ್ನು ಗ್ರಾಹಕರು ತಮ್ಮ ವಾಹನಗಳಿಗೆ ತುಂಬಿದರೇ , 10 ಪಾಯಿಂಟ್ಸ್ ಗಳನ್ನು ಪಡೆಯೋ ಅವಕಾಶವನ್ನಿಡಿದೆ.
ಇದೇ ರೀತಿ ಪಾಯಿಂಟ್ಸ್ ಗಳು 250 ತಲುಪಿದ್ದಲ್ಲಿ ರೂಪಾಯಿ 50 ರಿಯಾಯಿತಿ , 500 ಪಾಯಿಂಟ್ಸ್ ತಲುಪಿದರೇ ರೂಪಾಯಿ 100 ರಿಯಾಯಿತಿ ಮತ್ತು 1000 ಪಾಯಿಂಟ್ಸ್ ತಲುಪಿದ್ದಲ್ಲಿ ರೂಪಾಯಿ 150 ರಿಯಾಯಿತಿ ಮೊತ್ತ ಗ್ರಾಹಕರ ಕೈ ಸೇರಲಿದೆ. ಇಷ್ಟೇಯಲ್ಲದೇ 1500 ಪಾಯಿಂಟ್ಸ್ ತಲುಪುವ ಪ್ರತಿ ಗ್ರಾಹಕರಿಗೂ ಉಚಿತ ಖಾಕಿ ಅಂಗಿಯು ಕೊಡುಗೆಯಾಗಿ ಸಿಗಲಿದೆ.
ಈ ವಿಶೇಷ ಕೊಡುಗೆಗಳು ಜೂ. 6 ತನಕ ಮಾತ್ರವೇ ಚಾಲ್ತಿಯಲ್ಲಿದ್ದು , ಟೋಟಲ್ ಎನರ್ಜಿಸ್ ಎಲ್ ಪಿ ಜಿ ಗ್ರಾಹಕರು ಈ ಕೊಡುಗೆಯ ಪ್ರಯೋಜನ ಪಡೆಯುವಂತೆ ಆಯೋಜಕರು ವಿನಂತಿಸಿದ್ದಾರೆ.
ಬಿಂದು ಆಫರ್ ಕೊಡುಗೆ…
ಟೋಟಲ್ ಎರ್ನಜಿಸ್ ನಲ್ಲಿ ಕೂಲ್ ಡ್ರಿಂಕ್ಸ್ ಆಫರ್ ಕೂಡ ಲಭ್ಯವಿದ್ದು , ಜೊತೆಗೆ ಮಿನರಲ್ ವಾಟರ್ ಹಾಗೂ ಸ್ನ್ಯಾಕ್ಸ್ ಕೂಡ ಕೊಡುಗೆಯಾಗಿ ಮೇ.31 ರ ತನಕ ಸಿಗಲಿದೆ.