ಕಾವು: ಆರ್‌ಎಸ್‌ಎಸ್, ಜನಸಂಘದ ಹಿರಿಯ ಕಾರ್ಯಕರ್ತ ನಾರಾಯಣ ರಾವ್ ಪೂವಂದೂರು ಹೃದಯಾಘಾತದಿಂದ ನಿಧನ

0

ಕಾವು: ಮಾಡ್ನೂರು ಗ್ರಾಮದಲ್ಲಿ ಜನಸಂಘವನ್ನು ಕಟ್ಟಿ ಬೆಳೆಸಿದ್ದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಪೂವಂದೂರು ನಾರಾಯಣ ರಾವ್(82ವ.)ರವರು ಮೇ.13ರಂದು ಬೆಳಿಗ್ಗೆ ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಇಂದಿರಾ ರಾವ್, ಪುತ್ರರಾದ ಹರೀಶ್ ರಾವ್, ಗಿರೀಶ್ ರಾವ್ ಮತ್ತು ಪುತ್ರಿಯನ್ನು ಅಗಲಿದ್ದಾರೆ.


ಆರ್‌ಎಸ್‌ಎಸ್, ಜನಸಂಘದ ಹಿರಿಯ ಕಾರ್ಯಕರ್ತರು:
ನಾರಾಯಣ ರಾವ್ ಪೂಂದೂರುರವರು ಬಾಲ್ಯದಲ್ಲಿಯೇ ಆರ್‌ಎಸ್‌ಎಸ್‌ನ ಸ್ವಯಂಸೇವಕನಾಗಿ ಸಂಘದಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿ ಮಾಡ್ನೂರು ಗ್ರಾಮದಲ್ಲಿ ಆರ್‌ಎಸ್‌ಎಸ್‌ನ ಬೆಳವಣಿಗೆ ಪ್ರಮುಖರಾಗಿದ್ದರು, ಅವರ ಕಾಲಘಟ್ಟದಲ್ಲಿ ಸಂಘದ ಪ್ರಚಾರಕರಿಗೆ, ಸಂಘದ ಪ್ರಮುಖರಿಗೆ ವಾಸ್ತವ್ಯಕ್ಕೆ ಅವರ ಮನೆಯೇ ಆಶ್ರಯವಾಗಿತ್ತು. ಜನಸಂಘ ಆರಂಭವಾದಾಗ ಮಾಡ್ನೂರು ಕಾವುನಲ್ಲಿ ಜನಸಂಘವನ್ನು ಕಟ್ಟಿ ಬೆಳೆಸುವಲ್ಲಿಯೂ ಮುಂಚೂಣಿಯ ನಾಯಕರಾಗಿದ್ದರು. ವಿಶ್ವಹಿಂದೂ ಪರಿಷತ್‌ನಲ್ಲಿಯೂ ಜವಾಬ್ದಾರಿ ವಹಿಸಿದ್ದ ನಾರಾಯಣ ರಾವ್‌ರವರು ಕಾವುನಲ್ಲಿ ಅನೇಕ ಸಾಮಾಜಿಕ ಕಾರ್ಯ, ಹೋರಾಟದಲ್ಲೂ ಗುರುತಿಸಿಕೊಂಡಿದ್ದರು. ಧಾರ್ಮಿಕ ಕಾರ್ಯದಲ್ಲೂ ಮುಂಚೂಣಿಯಲ್ಲಿದ್ದ ನಾರಾಯಣ ರಾವ್‌ರವರು ಈ ಹಿಂದೆ ಒಂದು ಸಂದರ್ಭದಲ್ಲಿ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆ ನಿಂತು ಹೋಗಿದ್ದ ಸಮಯದಲ್ಲಿ ಜಾತ್ರೆ ಮತ್ತೆ ಪುನರಾರಂಭಿಸುವಲ್ಲಿ ಜವಾಬ್ದಾರಿ ವಹಿಸಿದ್ದರು. ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ ನಾರಾಯಣ ರಾವ್‌ರವರು ಮಾಡ್ನೂರು ಗ್ರಾ.ಪಂನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಾಟಕ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದ ನಾರಾಯಣ ರಾವ್‌ರವರು ಪ್ರಗತಿಪರ ಕೃಷಿಕರೂ ಆಗಿದ್ದರು.

LEAVE A REPLY

Please enter your comment!
Please enter your name here