ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಸತತ ಎರಡನೇ ವರ್ಷವೂ, ಹತ್ತನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಗಳಿಸಿ, ಅನೀಶ್ ಪ್ರಭು ಅವರು ಈ ಬಾರಿ ತಾಲೂಕಿನ ಪ್ರಥಮ ಸ್ಥಾನವನ್ನು ಗಳಿಸಿ, ಒಟ್ಟಾರೆಯಾಗಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿರುವರು.
2024-25ನೇ ಸಾಲಿನ ಬೋರ್ಡ್ ಪರೀಕ್ಷೆಗೆ ಹಾಜರಾದ 37 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 14 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುವರು.

ಅನೀಶ್ ಪ್ರಭು ಖಂಡಿಗೆ – 480( 96%) (ರಾಧೇಶ್ ಪ್ರಭು ಮತ್ತು ಶಿಲ್ಪಾ ರಾಧೇಶ್ ಪ್ರಭು ದಂಪತಿ ಪುತ್ರ ) ಅಂಕಗಳೊಂದಿಗೆ ಶಾಲೆಯಲ್ಲಿ ಹಾಗೂ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಪ್ರಾಪ್ತಿ ಬಿ. ಗೌಡ (ಬಾಲಕೃಷ್ಣ ಗೌಡ ಮತ್ತು ಉಮಾ ದಂಪತಿ ಪುತ್ರಿ ) 466 (93.2%) ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಪಿ.ಶಶಾಂಕ್ ಭಟ್( ಪಿ. ಗೋವಿಂದರಾಜ್ ಮತ್ತು ಪ್ರತಿಮಾ ಪಿ.ದಂಪತಿ ಪುತ್ರ) 457(91.4%) ರಷ್ಟು ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ಧೃತಿ ಜಿ.ಎಸ್. (ಗುರುಪ್ರಸಾದ್ ಡಿ.ಕೆ.ಮತ್ತು ಪ್ರತಿಭಾ ಕೆ. ದಂಪತಿ ಪುತ್ರಿ ) 452 (90.4%) ಅಂಕಗಳೊಂದಿಗೆ ಚತುರ್ಥ ಸ್ಥಾನ ಹಾಗೂ ನಂದಿಕ ಎಂ.ವೈ. (ಮಂಜುನಾಥ ವೈ ಮತ್ತು ಶ್ರೀಪ್ರಿಯ ದಂಪತಿ ಪುತ್ರಿ ) 450 (90%) ಅಂಕಗಳೊಂದಿಗೆ ಪಂಚಮ ಸ್ಥಾನವನ್ನು ಗಳಿಸಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ವಿಶೇಷ ಸಾಧನೆಗೈದ ಮಕ್ಕಳನ್ನು ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಸನ್ಮಾನಿಸಿದರು. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗಾಗಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಮತ್ತು ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ಪೋಷಕರ ನಿರಂತರ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.