ಪುತ್ತೂರು ಎಪಿಎಂಸಿ ಆವರಣ ರೈತ ಭವನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ, ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬೆಳಿಗ್ಗೆ ೧೦ರಿಂದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕಾರಿಣಿ ಸಭೆ ಸಂಜೆ ೫.೩೦ರಿಂದ ಕಾಂಗ್ರೆಸ್ ಕುಟುಂಬ ಸಮ್ಮಿಲನ, ರಾತ್ರಿ ೭.೩೦ರಿಂದ ಕುಟುಂಬ ಸಹಭೋಜನ
ಪುತ್ತೂರು ಹೂವಿನ ಮಾರ್ಕೆಟ್ ಬಳಿ, ಇನ್‌ಸ್ಪೈರ್ ಲರ್ನಿಂಗ್ ಸೆಂಟರ್‌ನಲ್ಲಿ ಮಧ್ಯಾಹ್ನ ೨ರಿಂದ ಅರಿವು ಕೃಷಿ ಕೇಂದ್ರದಿಂದ ಪಾಲಿಟೆಕ್ನಿಕ್ ಉಚಿತ ಮಾಹಿತಿ ಕಾರ್ಯಗಾರ
ಕುತ್ಯಾಳ ಹೊಸಮನೆಯಲ್ಲಿ ರಾತ್ರಿ ಕಲ್ಲುರ್ಟಿ, ಕೊರತಿ, ಗುಳಿಗ, ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ
ಗೋಳಿತೊಟ್ಟು ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಕೆದಂಬಾಡಿ ಗ್ರಾಮ ಮುಂಡಾಳಗುತ್ತು ದೈವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಗಣಪತಿ ಹವನ, ಹರಿಸೇವೆ, ಅನ್ನಸಂತರ್ಪಣೆ, ಸಂಜೆ ೪ರಿಂದ ಗುಳಿಗ ದೈವದ ನೇಮ, ೬ಕ್ಕೆ ಇದ್ಪಾಡಿ ಮಂಜಕೊಟ್ಯದಿಂದ ಶ್ರೀ ದೈವಗಳ ಭಂಡಾರ ಬರುವುದು, ಗೊಂದೋಳು ಪೂಜೆ, ಅನ್ನಸಂತರ್ಪಣೆ, ಧರ್ಮದೈವ ಪಿಲಿಭೂತ ನೇಮ
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕರ್ನೂರು ಶಾಖೆಯ ಆವರಣದಲ್ಲಿ ಬೆಳಿಗ್ಗೆ ೧೦ಕ್ಕೆ sಸಂಘದ ಸದಸ್ಯರ, ಗ್ರಾಹಕರ ಸಮಾವೇಶ, ಕೃಷಿ ಮಾಹಿತಿ ಕಾರ್ಯಾಗಾರ
ಕಾನಲ್ತಾಯ ಮಹಾಕಾಳಿ, ಶ್ರೀ ಮಹಾಗುರು ಸಿದ್ದ ಮರ್ದಬೈದ್ಯರ ಸಾನಿಧ್ಯದ ವಸ್ತುಸ್ಥಿತಿಯ ಬಗ್ಗೆ ಮುಳಿಬೈಲಿನ ಕುರಮಜಲು ಗುತ್ತುವಿನ ಪ್ರಾಂಗಣದಲ್ಲಿ ಬೆಳಿಗ್ಗೆ ೯ರಿಂದ ತಾಂಬೂಲ ಪ್ರಶ್ನಾ ಚಿಂತನೆ
ಕುದ್ಮಾರು ಗ್ರಾಮದ ಕೊಯಕ್ಕುಡೆ ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ
ಸುಳದ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾಯಿತ ಸಹಕಾರಿಗಳ ಸಮಾವೇಶ
ಬೆಂಗಳೂರು ಸೌಂದರ್ಯ ನಗರ, ೧೨ನೇ ಕ್ರಾಸ್ ಶ್ರೀ ಸೌಂದರ್ಯ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಉಗ್ರಾಣ ಮುಹೂರ್ತ, ಅಗ್ನಿ ಸಂಸ್ಕಾರ, ಸಂಜೆ ೪.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ೫.೩೦ ವಾಸ್ತುಹೋಮ, ದಿಕ್ಪಾಲಬಲಿ, ರಾಕ್ಷೆಘ್ನಹೋಮ
ಶುಭಾರಂಭ
ಬೆಳ್ತಂಗಡಿಯಲ್ಲಿ ಬೆಳಿಗ್ಗೆ ಮುಳಿಯ ಗೋಲ್ಡ್ & ಡೈಮಂಡ್ಸ್ ಶೋರೂಂ ನವೀಕೃತಗೊಂಡು ಶುಭಾರಂಭ
ಉತ್ತರಕ್ರಿಯೆ
ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಪುತ್ತೂರು, ಏಳ್ಮುಡಿ ಗಣೇಶ್ ರೇಡಿಯೋ ಕಾರ್ಪೋರೇಶನ್‌ನ ಮಾಲಕ ಪ್ರೇಮಾನಂದ ಡಿ. ಯವರ ಉತ್ತರಕ್ರಿಯೆ