ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡಾವು ಮಲೆಯಿಂದ ಕಟ್ಟತ್ತಾರುವರೆಗೆ ರಸ್ತೆ ಬದಿಯಲ್ಲಿ ಬಿದ್ದಿರುವ ಘನತ್ಯಾಜ್ಯವು ನೀರಿನ ಮೂಲಕ್ಕೆ ಸೇರುವುದನ್ನು ತಡೆಗಟ್ಟುವ ಸಲುವಾಗಿ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಚತಾ ಶ್ರಮದಾನ ನಡೆಸಲಾಯಿತು.
ರಸ್ತೆ ಬದಿಯಲ್ಲಿ ಬಿದ್ದಿರುವ ಘನ ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಮಳೆಗಾಲದಲ್ಲಿ ನೀರಿನ ಮೂಲಕ್ಕೆ ಸೇರುವುದನ್ನು ತಪ್ಪಿಸಲಾಯಿತು.
ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ., ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ, ಪಂಚಾಯತ್ ಸಿಬ್ಬಂದಿಗಳಾದ ಶಿವಪ್ರಸಾದ್, ಮಾಲತಿ, ರಾಕೇಶ್, ಧರ್ಮಣ್ಣ, ಅರಿವು ಕೇಂದ್ರದ ಮೇಲ್ವಿಚಾರಕಿ ಅನುಷಾ, ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ರಫೀಕ್ ತಿಂಗಳಾಡಿ, ಆಶಾ ಕಾರ್ಯಕರ್ತೆ ಸರೋಜಿನಿ, ವರ್ತಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕೆಂಗುಡೇಲು, ಕೆಪಿಎಸ್ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಮೀತ್ ರಾಜ್,ಪೊರ್ಲುದ ಕೆಯ್ಯೂರು ವಿಷನ್ 2025ರ ಸ್ಥಾಪಕಾಧ್ಯಕ್ಷ ಇಬ್ರಾಹಿಂ ಮಾಸ್ತರ್. ಸಾರ್ವಜನಿಕರಾದ ಕೃಷಿಕ ಫಾರೂಕ್, ಮೋಹಿನಿ ವಿಠಲ ರೈ, ಸ್ವಚ್ಛತಾ ಸೇನಾನಿಗಳಾದ ಕಾವ್ಯ, ಉಷಾ ಮತ್ತಿತರರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಗ್ರಾಪಂಗೆ ಸಹಕಾರ ನೀಡಿದರು.
ಪ್ರತೀ ದಿನ ಮಾಡಾವು ಮಲೆಯಿಂದ- ಸಂತೋಷ್ ನಗರದವರೆಗೆ ರಸ್ತೆ ಬದಿಯಲ್ಲಿ ಬಿದ್ದಿರುವ ಘನತ್ಯಾಜ್ಯವನ್ನು ಪೂರ್ವಾಹ್ನದ ಸಮಯದಲ್ಲಿ ಹೆಕ್ಕಿ ಗೋಣಿಚೀಲಗಳಲ್ಲಿ ತುಂಬಿಸಿಟ್ಟು, ಸ್ವಚ್ಛತಾ ಕಾರ್ಯದಲ್ಲಿ ನಿರಂತರವಾಗಿ ಗ್ರಾಮ ಪಂಚಾಯತ್ ಗೆ ಸಹಕಾರ ನೀಡುತ್ತಿರುವ ಪೊರ್ಲುದ ಕೆಯ್ಯೂರು ವಿಷನ್ 2025ರ ಸ್ಥಾಪಕಾಧ್ಯಕ್ಷರಾದ ಇಬ್ರಾಹಿಂ ಮಾಸ್ತರ್ ಹಾಗೂ ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಗ್ರಾಮ ಪಂಚಾಯತ್ ವತಿಯಿಂದ ಕೃತಜ್ಞತೆ ಸಲ್ಲಿಸಿದರು.