ಪುತ್ತೂರು: ಪ್ಲಾಟಿಂಗ್ ಮಾಡಿ ಅತೀ ಹೆಚ್ಚು ಪಹಣಿ ವಿತರಿಸಿದ ಹೆಗ್ಗಳಿಕೆಗೆ ಪುತ್ತೂರು ತಾಲೂಕಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮೇ.16 ರಂದು ಮಂಗಳೂರಿನಲ್ಲಿ ನಡೆದ ಪ್ರಜಾ ಸೌಧ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ಕೆ.ಟಿ ಗೋಪಾಲ್, ಗ್ರಾಮ ಆಡಳಿತ ಅಧಿಕಾರಿ ಉಮೇಶ್ ಕಾವಡಿ, ಭೂಮಾಪನ ಅಧಿಕಾರಿ ಶ್ರೀನಿವಾಸ ಮೂರ್ತಿ, ಸರ್ವೆಯರ್ ಪೂರ್ಣೇಶ್, ಗ್ರಾಮ ಸಹಾಯಕ ಹರ್ಷಿತ್ ರಿಗೆ ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಮುಖ್ಯಮಂತ್ರಿಗಳು ಗೌರವಿಸಿದ್ದಾರೆ. ಅತೀ ಹೆಚ್ಚು ಪ್ಲಾಟಿಂಗ್ ಹಾಗೂ ಆರ್ಟಿಸಿ ವಿತರಣೆ ಮಾಡಿದ ಹೆಗ್ಗಳಿಗೆ ಇವರಿಗೆ ಸಲ್ಲುತ್ತದೆ.