ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿಯಿಂದ ಮಹಾಸಭೆ, ಪುಸ್ತಕ ವಿತರಣೆ, ಅಭಿನಂದನೆ,ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ,(ರಿ) ಪುತ್ತೂರು, ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿ ವತಿಯಿಂದ ಕೆದಂಬಾಡಿ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಬಾಳಪ್ಪ ಸುವರ್ಣ ಬಾಳಯರವರ ಅಧ್ಯಕ್ಷತೆಯಲ್ಲಿ ಮಹಾಸಭೆ, ಪುಸ್ತಕ ವಿತರಣೆ, ಅಭಿನಂದನೆ,ಸನ್ಮಾನ ಕಾರ್ಯಕ್ರಮ ಮೇ.17ರಂದು ನಡೆಯಿತು.

ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೇಡೆಂಜಿ ಸಭೆಯನ್ನು ಉದ್ಘಾಟಿಸಿ , ತಾಲೂಕು ಬಿಲ್ಲವ ಸಂಘದಿಂದ ಗ್ರಾಮ ಸಮಿತಿಗಳಿಗೆ ಕೊಡುತ್ತಿರುವ ಸಹಾಯಧನ,ವಿದ್ಯಾರ್ಥಿ ವೇತನ ಮತ್ತು ಸಮಾಜ ಬಾಂಧವರಿಗೆ ಪ್ರಸ್ತುತ ಕೊಡುತ್ತಿರುವ ಪ್ರೋತ್ಸಾಹದಾಯಕ ರಿಯಾಯಿತಿಗಳ ಬಗ್ಗೆ ಮಾಹಿತಿ ನೀಡಿದರು.

ಪುತ್ತೂರು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸುವರ್ಣ,ಪುತ್ತೂರು ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷರಾದ ವಿಮಲಾ ಸುರೇಶ್,ಕೆ ಯಸ್ ಆರ್ ಟಿ ಸಿ ಸಂಚಾರ ನಿಯಂತ್ರಕ ಕೋಚಣ್ಣ ಪೂಜಾರಿ ಎಂಡೆಸಾಗು,ಸುಶಾ ಡ್ರೆಸ್ ಮಾಲಕ ಸುರೇಶ್ ತಿಂಗಳಾಡಿ,ಪುತ್ತೂರು ತಾಲೂಕು ಯುವವಾಹಿನಿ ಅಧ್ಯಕ್ಷ ಅಣ್ಣಿ ಪೂಜಾರಿ ಬಿರ್ಣಹಿತ್ತಿಲು ಮಾಜಿ ಯುವವಾಹಿನಿ ಅಧ್ಯಕ್ಷರು ಹಾಗು ಪುರೋಹಿತ ಹರೀಶ್ ಶಾಂತಿ,ಕೆದಂಬಾಡಿ ಬಿಲ್ಲವ ಮಹಿಳಾವೇದಿಕೆ ಅಧ್ಯಕ್ಷೆ ಹೇಮಲತ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಶುಭ ಹಾರೈಸಿದರು.

ಅರಿಯಡ್ಕ,ಮಹಿಳಾ ವೇದಿಕೆ ಅಧ್ಯಕ್ಷೆ ಯಶೋಧ ಮಜ್ಜರ್,ಹಾಗು ಕೆದಂಬಾಡಿ ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ಬೇಬಿ ಬಾರಿಕೆ ಸಭೆಯಲ್ಲಿ ಉಪಸ್ಥಿತರಿದ್ದರು. 2024-2025ರಲ್ಲಿ ಯಂ ಸಿ ಎ ಅಂತಿಮ ವರ್ಷದಲ್ಲಿ ಶೇಕಡಾ 90 ಅಂಕ ಪಡೆದಿರುವ ಎoಡೆಸಾಗು ಮಾಲತಿ ಕೋಚಣ್ಣ ಪೂಜಾರಿ ಮಗಳಾದ ಅದೀಕ್ಷ ಎಚ್ ಕೆ ಹಾಗು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಅನುಷಾ,ಯಸ್ ಯಸ್ ಯಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೋಕ್ಷ ರನ್ನು ಸನ್ಮಾನಿಸಲಾಯಿತು.

ಅದೀಕ್ಷ ಎಚ್ ಕೆ ರವರು ಪ್ರಾರ್ಥಿಸಿದರು. ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕುಂಬ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಗೌರವ ಸಲಹೆಗಾರ ಬಾಬು ಇದ್ಪಾಡಿಯವರು ವಂದಿಸಿದರು. ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿಯ ಗೌರವ ಸಲಹೆಗಾರ ಹಾಗು ಮಾಜಿ ಯುವವಾಹಿನಿ ಅಧ್ಯಕ್ಷ ಬಾಬು ಪೂಜಾರಿ ಇದ್ಪಾಡಿ,ನಾರಾಯಾಣ ಪೂಜಾರಿ ಕುರಿಕ್ಕಾರ,ಗ್ರಾಮ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್ ಕುಂಬ್ರ ಹಾಗು ಸದಸ್ಯರುಗಳಾದ ಪರಮೇಶ್ವರ,ಅಕ್ಷತ ದಿನೇಶ್ ತಿಂಗಳಾಡಿ,ಉಮೇಶ್ ಇದ್ಪಾಡಿ,ಗಂಗಾಧರ ಬಾಳಯ,ಪ್ರಾರ್ಥನ್ ಕುರಿಕ್ಕಾರ,ಬೇಬಿ ಬಾರಿಕೆ ಸಹಕರಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೇ ನಡೆಯಿತು. ಅಧ್ಯಕ್ಷರಾಗಿ ಬಾಳಪ್ಪ ಪೂಜಾರಿ ಬಾಳಯ, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್ ತಿಂಗಳಾಡಿ, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕುಂಬ್ರ, ಜೊತೆ ಕಾರ್ಯದರ್ಶಿಯಾಗಿ ಬೇಬಿ ಬಾರಿಕೆ, ಕೋಶಾಧಿಕಾರಿಯಾಗಿ ಉಮೇಶ್ ಮಾರುತಿಪುರ ಇದ್ಪಾಡಿ ಆಯ್ಕೆಯಾದರು.

ಮಹಿಳಾ ವೇದಿಕೆಯಿಂದ ಅಧ್ಯಕ್ಷೆಯಾಗಿ ಹೇಮಲತ ಮಾರುತಿಪುರ, ಉಪಾಧ್ಯಕ್ಷೆಯಾಗಿ ಮಾಲತಿ ಕೋಚಣ್ಣ ಪೂಜಾರಿ ಎಂಡೆಸಾಗು,ಕಾರ್ಯದರ್ಶಿಯಾಗಿ ಪೂರ್ಣಿಮ ಬಾಬು ಪೂಜಾರಿ ಇದ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಭವಾನಿ ಕುರಿಕ್ಕಾರ, ಕೋಶಾಧಿಕಾರಿಯಾಗಿ ದಿವ್ಯ ನಾರಾಯಣ ಪೂಜಾರಿ ಕುರಿಕ್ಕಾರ ಆಯ್ಕೆಯಾದರು.

LEAVE A REPLY

Please enter your comment!
Please enter your name here