ಪುತ್ತೂರು : ಮೇ 18 ರಿಂದ 20 ರ ತನಕ ನಡೆಯಲಿರುವ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಇಂದಿನಿಂದ ಪ್ರಾರಂಭಗೊಂಡಿದೆ.
ಈ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕಿನ ಸರ್ವೆ ಕಲ್ಪನೆ ಪ್ರೌಢಶಾಲಾ ಶಿಕ್ಷಕರಾದ ಜಾರ್ಜ್ ಕೆ ವಿ ವಾಲಿಬಾಲ್ ನಲ್ಲಿ, ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆರೆಲ್ತಡಿಯ ಶಿಕ್ಷಕರಾದ ಶ್ರೀಕಾಂತ್ ಕಂಬಳ ಕೋಡಿ ಇವರು ವಾಲಿಬಾಲ್ ಹಾಗೂ ಕೇರಂ ಸಿಂಗಲ್ಸ್, ಕೇರಂ ಡಬಲ್ಸ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.