ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶಿವನಾಥ ರೈ ಮೇಗಿನಗುತ್ತು ಆಯ್ಕೆಗೊಂಡಿದ್ದಾರೆ. ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಆಗಿರುವ ಶಿವನಾಥ ರೈ ಅವರು ಈ ಹಿಂದೆ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನರ್ ನಿರ್ಮಾಣದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ,ಬ್ರಹ್ಮಕಲಶೋತ್ಸವದ ಸಂಚಾಲಕರಾಗಿ ಮತ್ತು ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಆಯ್ಕೆ ಪ್ರಕ್ರಿಯೆ ವೇಳೆ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀರಾಮ ಕಲ್ಲೂರಾಯ, ಆನಂದ ಪೂಜಾರಿ ಕೆ, ವಿಜಯಕುಮಾರ್ ರೈ, ವಸಂತ ರೈ ಸೊರಕೆ, ಉಮೇಶ್ ಎಸ್.ಡಿ, ಅಶೋಕ್ ನಾಯ್ಕ ಸೊರಕೆ, ಸುಮತಿ ಕರ್ಮಿನಡ್ಕ, ಕವಿತಾ ತಂಬುತ್ತಡ್ಕ ಉಪಸ್ಥಿತರಿದ್ದರು. ಜೂ.1ರಂದು ಮಧ್ಯಾಹ್ನ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ನೂತನ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ತಿಳಿಸಿದ್ದಾರೆ.