ಪುತ್ತೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಮರ್ಕಝುಲ್ ಹುದಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಂ.ಎ ಫರ್ಹತ್ ರಾಜ್ಯಕ್ಕೆ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ದ್ವಿತೀಯ ಪರೀಕ್ಷೆ ಬರೆದ ಅವರು ಹೆಚ್ಚುವರಿ ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಾಗ ಎಂ.ಎ ಫರ್ಹತ್ ಅವರು 587/600 ಅಂಕ ಪಡೆದುಕೊಂಡಿದ್ದರು. ದ್ವಿತೀಯ ಬಾರಿ ಪರೀಕ್ಷೆ ಬರೆದು ಹೆಚ್ಚುವರಿಯಾಗಿ 4 ಅಂಕ ಪಡೆಯುವ ಮೂಲಕ ಅವರ ಅಂಕ ಗಳಿಕೆ 591/600 ಆಗಿದ್ದು 98% ಅಂಕ ಪಡೆದುಕೊಂಡಂತಾಗಿದೆ.
ಮಡಿಕೇರಿ ತಾಲೂಕಿನ ಕುಂಜಿನ ನಿವಾಸಿ ಅಬ್ದುಲ್ ಫತ್ತಾಹ್ ಮತ್ತು ರಮ್ಲಾ ದಂಪತಿಗಳ ಪುತ್ರಿಯಾದ ಎಂ.ಎ ಫರ್ಹತ್ ಕುಂಬ್ರ ಮರ್ಕಝುಲ್ ಹುದಾದ ಹಾಸ್ಟಲ್ ವಿದ್ಯಾರ್ಥಿನಿಯಾಗಿದ್ದು ಮುಂದಕ್ಕೆ ಸಿ.ಎ ಮಾಡಲು ಮಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ದಾಖಲಾಗಿದ್ದಾರೆ ಎಂದು ಮೀಡಿಯಾ ಮರ್ಕಝ್ ತನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.