ಉಪ್ಪಿನಂಗಡಿ: ಇಲ್ಲಿನ ದರ್ಶನ್ ಎಂಟರ್ಪ್ರೈಸಸ್ ಸಮೂಹ ಸಂಸ್ಥೆಗಳ ಸಹ ಸಂಸ್ಥೆಯಾಗಿ ಉಪ್ಪಿನಂಗಡಿ ಇಳಂತಿಲ ಭಾಗದಲ್ಲಿ ನಿರ್ಮಾಣಗೊಂಡಿರುವ ಶಿವ್ ದರ್ಶನ್ ಪ್ಯೂಯೆಲ್ ಜಂಕ್ಷನ್ ಮೇ.19ರಂದು ಲೋಕಾರ್ಪಣೆಗೊಂಡಿತು.
ಉದ್ಘಾಟನೆಯನ್ನು ನೆರವೇರಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದ ಬಳಿಕ ಪೆಟ್ರೋಲ್ ಪಂಪುಗಳ ಸ್ಥಾಪನೆಗೆ ಇದ್ದ ಅಡೆತಡೆಗಳನ್ನು ನಿವಾರಿಸಿದ ಬಳಿಕ ಪೆಟ್ರೋಲ್ ಪಂಪುಗಳು ಹಲವೆಡೆ ನಿರ್ಮಾಣವಾಗುತ್ತಿದೆ. ಅತ್ಯುತ್ತಮ ರೀತಿಯಲ್ಲಿ ನಿರ್ಮಾಣವಾಗಿರುವ ಈ ಉದ್ಯಮ ಯಶಸ್ಸು ಸಾಧಿಸಲಿ ಎಂದವರು ತಿಳಿಸಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸೇವೆ ಉತ್ಕೃಷ್ಠವಾಗಿದ್ದೊಡೆ ಯಶಸ್ಸು ಸಹಜವಾಗಿ ಲಭಿಸಲಿದೆ. ಗ್ರಾಮೀಣ ಭಾಗದಲ್ಲಿ ತಲೆ ಎತ್ತಿರುವ ಈ ಪೆಟ್ರೋಲ್ ಪಂಪು ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಹಿಂದೂಸ್ತಾನ ಪೆಟ್ರೋಲಿಯಂ ಸಂಸ್ಥೆಯ ಡಿಜಿಎಂ ನವೀನ್ ಕುಮಾರ್ ಎಂ ಜಿ ಮಾತನಾಡಿ, ಸರಕಾರದ ನಿರ್ದೇಶನದನ್ವಯ ನಿರ್ಮಾಣವಾಗಿರುವ ಹೊಸ ಮಾದರಿಯ ಈ ಪೆಟ್ರೋಲ್ ಪಂಪು ಜಿಲ್ಲೆಯಲ್ಲೇ ಪ್ರಥಮವಾಗಿದೆ. ಇಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸುವ ವ್ಯವಸ್ಥೆ ಅನುಷ್ಠಾವಾಗಲಿ ಎಂದವರು ಆಶಿಸಿದರು.
ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಜನರ ಜೀವನ ಮಟ್ಟ ಸುಧಾರಿಸುತ್ತಿರುವ ಇಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಪೂರಕವಾಗಿ ಇಂಧನ ವ್ಯವಸ್ಥೆಯನ್ನು ಇಳಂತಿಲ ಗ್ರಾಮದಲ್ಲಿ ಒದಗಿಸಲು ಮುಂದಾಗಿರುವುದು ಶ್ಲಾಘನೀಯವೆಂದರು. ಮಾತ್ರವಲ್ಲದೆ ಸಂಸ್ಥೆಯ ಮಾಲಕರಾದ ಸುದರ್ಶನ್ ರವರ ತಂದೆ ಸ್ವರ್ಗೀಯ ಚಂದಯ್ಯ ಎಂ ರವರು ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸನ್ನು ಅವರ ಮಕ್ಕಳು ಮುಂದುವರೆಸುತ್ತಿರುವುದು ಸಂತಸ ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಸದಸ್ಯೆಯ ಪ್ರಬಂಧಕರಾದ ಇಶಿತಾ ಗರ್ಗ್, ಸಹಾಯಕ ಪ್ರಬಂಧಕರಾದ ಪ್ರಭಾತ್ ಶ್ರೀವಾಸ್ತವ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ ರಾಧಾಕೃಷ್ಣ ನಾಕ್ , ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿಯ ಹಿರಿಯ ಸದಸ್ಯ ಡಾ. ಎಂ ಆರ್ ಶೆಣೈ, ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ, ಉಪ್ಪಿನಂಗಡಿ ದೀನರ ಕನ್ಯಾ ಮಾತೆ ಕ್ರೈಸ್ತ ದೇವಾಲಯದ ಧರ್ಮಗುರು ರೆ| ಫಾ| ಜೆರಾಲ್ಡ್ ಡಿಸೋಜಾ, ಸಾಮಾಜಿಕ ಕಾರ್ಯಕರ್ತ ಯು ಟಿ ಫಯಾಜ್ ಅಹಮ್ಮದ್, ಕಡೆಶಿವಾಲಯದ ಯಮುನಾ ಬೋರ್ ವೆಲ್ಸ್ ಮಾಲಕ ಕಿರಣ್ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮುರಳೀರಾಜಗೋಪಾಲ ಹೆಗ್ಡೆ, ಕೃಷ್ಣ ಹಸಂತಡ್ಕ, ಉಮಾನಾಥ ಶೆಟ್ಟಿ,ಡಾ ಎಂ ಎನ್ ಭಟ್, ಡಾ. ನಿರಂಜನ್ ರೈ, ಡಾ. ರಾಜಾರಾಮ ಕೆ ಬಿ, ಮಾಕ್ಸಿಂ ಲೋಬೋ , ಡಾ ಪ್ರಸನ್ನ ಕುಮಾರ್ , ರಮೇಶ್ ಎನ್ , ಸುರೇಶ್ ರೈ, ವೆಂಕಪ್ಪ ಗೌಡ, ಪೌಝರ್ ಯು ಟಿ, ಹರೀಶ್ ನಾಯಕ್ ನಟ್ಟಿಬೈಲ್ , ಅತುಲ್ ಕಶ್ಯಪ್, ಕಂಗ್ವೆ ವಿಶ್ವನಾಥ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್, ಎನ್ ಉಮೇಶ್ ಶೆಣೈ, ಯು ಟಿ ತೌಷಿಫ್ , ಧನಂಜಯ ನಟ್ಟಿಬಲ್, ಸಂತೋಷ್ ಅಡೆಕ್ಕಲ್, ರೇವತಿ ರಮೇಶ್, ಪುಷ್ಪಲತಾ, ಶಕುಂತಳಾ, ಕೆ ಆರ್ ಉಳ್ಳಾಲ್, ವೀಣಾ ವಸಂತ್, ರೋಹನ್ ಬಂಗೇರ, ರೋಹನ್ , ಹರ್ಷಲ್, ತಿಮ್ಮಪ್ಪ ಗೌಡ, ರವಿನಂದನ್ ಹೆಗ್ಡೆ, ನಾಗರಾಜ್, ಫಾರೂಕ್, ಪ್ರಸಾದ್ ಪಚ್ಚಾಡಿ, ರವೀಂದ್ರ ಆಚಾರ್ಯ, ಗಣೇಶ್ ರಾಗ್ ಸ್ವೀಟ್ಸ್, ಮಾರ್ಕ್ ಮಸ್ಕರೇನಸ್, ಜಯಪ್ರಕಾಶ್ ಬದಿನಾರ್, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಕೆ ಜಗದೀಶ್ ಶೆಟ್ಟಿ, ಶರತ್ ಕೋಟೆ, ಶಶಿಧರ್ ಶೆಟ್ಟಿ, ಚಂದ್ರಶೇಖರ್ ತಾಳ್ತಜೆ, ಮೇದರಬೆಟ್ಟು ಸಿದ್ದಿಕ್, ಕೆ ರಾಘವೇಂದ್ರ ನಾಯಕ್, ಮೊಹಮ್ಮದ್ ಬೆದ್ರೋಡಿ, ಶ್ರೀಕಾಂತ್ ಪಟೇಲ್, ಮೊದಲಾದವರು ಭಾಗವಹಿಸಿದ್ದರು.
ಕುಮಾರಿ ಸಾನ್ವಿ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಕೇಶ್ ಸ್ವಾಗತಿಸಿದರು. ರಕ್ಷಾ ಸುದರ್ಶನ್ ವಂದಿಸಿದರು. ಸಂಸ್ಥೆಯ ಮಾಲಕರಾದ ಸುದರ್ಶನ್ ಕುಮಾರ್ ಎಂ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಯ ನೆಲೆಯಲ್ಲಿ ನಿರ್ಮಣವಾಗಿರುವ ಈ ಪೆಟ್ರೋಲ್ ಬಂಕ್ ಉಪ್ಪಿನಂಗಡಿಯನ್ನು ಕೇಂದ್ರೀಕರಿಸಿದ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲವನ್ನು ಕಲ್ಪಿಸಲಿದ್ದು, ಗ್ರಾಹಕ ಸ್ನೇಹಿ ವ್ಯವಸ್ಥೆಯನ್ನು ಹೊಂದಿದೆ ಎಂದು ಸಂಸ್ಥೆಯ ಮಾಲಕರಾದ ಸುದರ್ಶನ್ ಕುಮಾರ್ ಎಂ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.