ಮೇ.21: ಕೇಶ್ರೀ ದುರ್ಗಾ ಟೆಕ್ಷ್‌ಟೈಲ್ಸ್ ಮತ್ತು ರೆಡಿಮೇಡ್ಸ್ ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ ಹಳೇ ಬಸ್ ನಿಲ್ದಾಣದ ಬಳಿಯ ಹಸನ್ ಟವರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ದುರ್ಗಾ ಟೆಕ್ಷ್‌ಟೈಲ್ಸ್ ಮತ್ತು ರೆಡಿಮೇಡ್ಸ್ ಜವಳಿ ಉದ್ಯಮವು ನೂತನ ಆಡಳಿತದೊಂದಿಗೆ ಕೇಶ್ರೀ ದುರ್ಗಾ ಹೆಸರಿನಲ್ಲಿ ಮೇ.21 ರ ಬುಧವಾರದಂದು ಪುನರಾರಂಭಗೊಳ್ಳಲಿದೆ.


ಜವಳಿ ಉದ್ಯಮದಲ್ಲಿ ಹೆಸರುವಾಸಿಯಾಗಿರುವ ಡಿ. ಪುಕರಾಮ್‌ರವರ ಮಾಲಕತ್ವದಲ್ಲಿ ಪುನರಾರಂಭಗೊಳ್ಳಲಿರುವ ಈ ಜವಳಿ ಮಳಿಗೆಯು 10,೦೦೦ ಚದರ ಅಡಿ ವಿಸ್ತೀರ್ಣದ ವಿಶಾಲ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ನವಜಾತ ಶಿಶುಗಳಿಂದ ಮೊದಲುಗೊಂಡು ಪುರುಷರು, ಮಹಿಳೆಯರಾದಿಯಾಗಿ ವಯೋಮಾನಕ್ಕನುಗುಣವಾದ ಎಲ್ಲರಿಗೂ ಎಲ್ಲಾ ಸ್ವರೂಪದ ವಸ್ತ್ರಗಳು ಸುಲಲಿತವಾಗಿ ಆಯ್ಕೆಗೆ ದೊರೆಯುವಂತಾಗಲು ಪ್ರತ್ಯೇಕ ಸೆಕ್ಷನ್‌ಗಳನ್ನು ರಚಿಸಿ ಬಟ್ಟೆಬರೆಗಳನ್ನು ಜೋಡಿಸಿಡಲಾಗಿದೆ. ಈಗಾಗಲೇ ರಾಷ್ಟ್ರದ ಹೆಸರಾಂತ ವಸ್ತ್ರ ಉದ್ಯಮದ ಬಟ್ಟೆ ಬರೆಗಳ ದಾಸ್ತಾನು ಇಲ್ಲಿದ್ದು, ಗ್ರಾಹಕರ ಮನೋಭಿಲಾಶೆಗೆ ಸ್ಪಂದಿಸುವಂತಿದೆ.
ರಾಮ್‌ರಾಜ್ ಕಾಟನ್, ರೆಮಂಡ್ಸ್, ಸಿಯಾರಾಮ್, ಜಾಕಿ, ಮೈಕ್ರೊಮನ್, ಪೋಪೀಸ್, ಸಿಲ್ಕ್ ಮಾರ್ಕ್, ಡಾಲರ್, ಸ್ಪಾರ್ಕಿ ಜೆಮ್ಸ್, ಝೀಲ್ರೈನ್ ವೇರ್ ಮೊದಲಾದ ಹಲವಾರು ಬ್ರಾಂಡ್‌ಗಳ ನವ ನವೀನ ಮಾದರಿಯ ಬಟ್ಟೆ ಬರೆಗಳನ್ನು ದಾಸ್ತಾನು ಹೊಂದಲಾಗಿದೆ. ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಒಂದೇ ಸೂರಿನಡಿ ಎಲ್ಲಾ ಬಗೆಯ ವಸ್ತ್ರಗಳು ಲಭಿಸುವಂತಾಗಿದೆ ಎಂದು ಸಂಸ್ಥೆಯ ಮಾಲಕ ಡಿ. ಪುಕಾರಾಮ್ ತಿಳಿಸಿದ್ದಾರೆ.


ನೂತನ ಮಾಲಕತ್ವದೊಂದಿಗೆ ಶುಭಾರಂಭ:
ಶ್ರೀ ದುರ್ಗಾ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆಯು ಇನ್ನು ಮುಂದಕ್ಕೆ ಕೇಶ್ರೀ ದುರ್ಗಾ ಹೆಸರಿನಲ್ಲಿ ಶುಭಾರಂಭಗೊಳ್ಳುತ್ತಿದ್ದು, ಕಾರ್ಯಕ್ರಮವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್ , ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರ ಬಿ. ಗಣೇಶ್ ಶೆಣೈ, ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ, ಬೆಂಗಳೂರಿನ ಶ್ರೀ ಕೃಷ್ಣ ಗೋ ಶಾಲೆಯ ಶ್ರೀ ಪುಖ್‌ರಾಜ್ ಸ್ವಾಮೀಜಿ , ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಎಚ್. ಯೂಸುಫ್ ಹಾಜಿ, ಗ್ರಾಮ ಪಂಚಾಯತ್ ಸದಸ್ಯ ಯು.ಟಿ. ತೌಶೀಫ್ , ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧಾ, ಖ್ಯಾತ ದಂತ ವೈದ್ಯ ಡಾ. ರಾಜಾರಾಮ ಕೆ.ಬಿ., ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ , ವರ್ತಕ ಸಂಘದ ಉಪಾಧ್ಯಕ್ಷ ಶಬೀರ್ ಕೆಂಪಿ, ಹಸನ್ ಟವರ್ ಮಾಲಕ ಕೆ ಮಹಮ್ಮದ್ ಇಕ್ಬಾಲ್, ಕೆನರಾ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ ಬಿ. ಮಹಮ್ಮದ್ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಡಿ. ಪುಕಾರಾಮ್ ತಿಳಿಸಿದ್ದಾರೆ.

ಪ್ರತಿ ಖರೀದಿಗೆ ಶೇ.20 ರಿಯಾಯಿತಿ
ಸಂಸ್ಥೆಯ ನೂತನ ಆಡಳಿತ ಮಂಡಳಿಯ ಶುಭಾರಂಭದ ಸವಿ ನೆನಪಿಗೆ ಪ್ರತಿ ಖರೀದಿಗೆ ಶೇ. 20 ರ ರಿಯಾಯಿತಿಯನ್ನು ಘೋಷಿಸಲಾಗಿದ್ದು, ಈ ಕೊಡುಗೆಯು ಮೇ 21 ರಿಂದ ಮೇ 31 ರ ವರೆಗೆ ಜಾರಿಯಲ್ಲಿರುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here