ರಾಮಕುಂಜ: ಕೊಯಿಲ ಗ್ರಾಮದ ಗಂಡಿಬಾಗಿಲುನಿಂದ ಸನ್ಯಾಸಿಮೂಲೆ ಸಂಪರ್ಕದ ರಸ್ತೆಗೆ ಕಾಂಕ್ರಿಟೀಕರಣ ಮತ್ತು ಚರಂಡಿ ಕಾಂಕ್ರಿಟೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನಡೆಯಿತು.
ರಸ್ತೆಗೆ ಕಾಂಕ್ರಿಟೀಕರಣ ಕಾಮಗಾರಿಗೆ ಮಹಾತ್ಮಾ ಗಾಂಧಿ ಉದ್ಯೋಗಖಾತರಿ ಯೋಜನೆ ಅಡಿಯಲ್ಲಿ 5 ಲಕ್ಷ ರೂಪಾಯಿ ಮತ್ತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ 2 ಲಕ್ಷ ರೂಪಾಯಿ ಅನುದಾನ ನೀಡಿದ್ದು, ಚರಂಡಿ ಕಾಮಗಾರಿಗೆ 15ನೇ ಹಣಕಾಸು ಯೋಜನೆಯಲ್ಲಿ 1.90 ಲಕ್ಷ ರೂಪಾಯಿ ಮಂಜೂರು ಆಗಿದ್ದು ಇದರ ಶಿಲಾನ್ಯಾಸ ಕಾರ‍್ಯಕ್ರಮ ಮೇ.7ರಂದು ನಡೆಯಿತು.
ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್ ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ ರಾಮಕುಂಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಅಕ್ರಮ ಸಕ್ರಮ ಸಮಿತಿ ಸದಸ್ಯ ಹೆಚ್. ಆದಂ, ಕೊಯಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯತೀಶ್, ಸದಸ್ಯರಾದ ನಝೀರ್ ಪೂರಿಂಗ, ಚಿದಾನಂದ, ಜೊಹರಾ ಇಕ್ಬಾಲ್, ಸಫೀಯ, ಮಸೀದಿ ಅಧ್ಯಕ್ಷ ಎಸ್. ಅಬ್ದುಲ್ ರಹಿಮಾನ್, ಸ್ಥಳೀಯ ಪ್ರಮುಖರಾದ ಎ.ಕೆ. ಬಶೀರ್, ಎಸ್.ಪಿ. ಖಲಂದರ್, ಸಲೀಕತ್ ಕೆಮ್ಮಾರ, ಝೈನ್ ಆತೂರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಪಿಡಿಒ. ಸಂದೇಶ್ ಸ್ವಾಗತಿಸಿ, ಕಾರ‍್ಯದರ್ಶಿ ಪಮ್ಮು ವಂದಿಸಿದರು.