ಉಪ್ಪಿನಂಗಡಿ: ಇಲ್ಲಿನ ಇಳಂತಿಲ ಗ್ರಾಮದ ಅಂಡೆತಡ್ಕ ಮನೆ ನಿವಾಸಿ ಅರುಣ್ ಎ. (35.ವ) ಎಂಬವರು ಮೇ ತಿಂಗಳ 1 ರಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನಾಪತ್ತೆಯಾದ ಅರುಣ್ ರವರ ಸಹೋದರ ಸುನಿಲ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ಮೂಲತಃ ಕೇರಳ ರಾಜ್ಯದ ಕಾಸರಗೋಡು ನೀರ್ಚಾಲ್ ಗ್ರಾಮದ ನಿವಾಸಿಯಾಗಿರುವ ಇವರುಗಳು ಇಳಂತಿಲ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಇಳಂತಿಲದಲ್ಲೇ ತಾತ್ಕಾಲಿಕ ವಾಸ್ತವ್ಯವನ್ನು ಹೊಂದಿದ್ದರು.
ಮೇ.1 ರಂದು ತನಗೆ ಹೊಟ್ಟೆ ನೋವಿದೆಯೆಂದು ತಿಳಿಸಿ ಔಷಧಿಗೆಂದು ಹಣವನ್ನು ಪಡೆದು ಮನೆಯಿಂದ ಹೋದವರು ಹಿಂದಿರುಗಿ ಬರಲಿಲ್ಲವೆಂದು ತಿಳಿಸಿ ನಾಪತ್ತೆಯಾಗಿರುವ ಬಗ್ಗೆ ವಿಳಂಬಿಸಿ ದೂರು ನೀಡಿರುತ್ತಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.