ಪುತ್ತೂರು: ಹೈಕೋರ್ಟ್ ನ್ಯಾಯಾಧೀಶ, ವಿಟ್ಲ ಕೇಪು ಮೂಲದ ರಾಜೇಶ್ ರೈ ಕಲ್ಲಂಗಳ ಮತ್ತು ಪತ್ನಿ ರೇಶ್ಮಾ ರಾಜೇಶ್ ರೈ ದಂಪತಿ ಸಮೇತರಾಗಿ ಮೇ.22ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರು.
ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ನ್ಯಾಯಾಧೀಶರಿಗೆ ಪ್ರಸಾದ ವಿತರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದ ಗೌರವಾರ್ಥವಾಗಿ ಶಲ್ಯ ನೀಡಿ ಗೌರವಿಸಿದರು. ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ನ್ಯಾಯಾಧೀಶ ವಕೀಲರ ಸಂಘದ ಅಧ್ಯಕ್ಷ ಜಿ.ಜಗನ್ನಾಥ ರೈ, ಸನ್ನತ್ ರೈ ಮತ್ತಿತರರು ಉಪಸ್ಥಿತರಿದ್ದರು.