ಜಿಎಲ್ ಆಚಾರ್ಯದಲ್ಲಿ ’ಸ್ವರ್ಣಧಾರ’ ಸ್ಕೀಂ ಪ್ರಾರಂಭ

0

ಪುತ್ತೂರು: ಜಿಎಲ್ ಆಚಾರ್ಯ ಜ್ಯುವೆಲ್ಲರ‍್ಸ್‌ನ ಸ್ವರ್ಣಧಾರ ಎಂಬ ಚಿನ್ನಾಭರಣದ ಉಳಿತಾಯ ಯೋಜನೆಯನ್ನು ಗುರವಾರದಂದು (ಮೇ.22) ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರಿನ ಲಕ್ಷ್ಮೀ ಹೊಟೇಲ್ ಮಾಲಕರ ಸೊಸೆ ಹಾಗೂ ಸೂರತ್‌ನಲ್ಲಿ ಹೊಟೇಲ್ ಉದ್ಯಮಿಯಾಗಿರುವ ಮಾನಸ ಪ್ರವೀಣ ಮತ್ತು ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಶ್ರೀಲಕ್ಷ್ಮೀಶ ಪಾರ್ಲ ಅವರು ಮಾಸಿಕ ಕಂತುಗಳ ಈ ವಿಶೇಷ ಯೋಜನೆಯನ್ನು ಉದ್ಘಾಟಿಸಿದರು.


ಬಳಿಕ ಮಾತನಾಡಿದ ಮಾನಸ ಅವರು, ಚಿನ್ನಾಭರಣದ ಉಳಿತಾಯ ಯೋಜನೆಯ ಮೂಲಕ ಬೋನಸ್ ಕೂಡ ನೀಡಲಾಗುತ್ತಿದೆ. ಇದು ಗ್ರಾಹಕರಿಗೆ ಉಪಕಾರಿಯಾಗಿದೆ. ನಾವು ಬಾಲ್ಯದಿಂದಲೇ ಜಿಎಲ್ ಆಚಾರ್ಯ ಜ್ಯುವೆಲ್ಲರ‍್ಸ್ ಸಂಸ್ಥೆಯ ಅಭಿಮಾನಿಗಳಾಗಿದ್ದೇವೆ. ಈಗಲೂ ಈ ಸಂಸ್ಥೆಯ ಗ್ರಾಹಕರಾಗಿದ್ದೇವೆ. ದೇಶಾದ್ಯಂತ ಇದರ ಶಾಖೆಗಳು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.


ಪ್ರಥಮಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಟ್ಟಾಗ ಜಿಎಲ್ ಆಚಾರ್ಯ ಸಂಸ್ಥೆಯ ಪರಿಚಯವಾದ ಬಗ್ಗೆ ಮಾತನಾಡಿದ ಶ್ರೀಲಕ್ಷ್ಮೀಶ ಅವರು, ಈ ಸಂಸ್ಥೆ ಇನ್ನೂ ಹಲವೆಡೆ ತೆರೆಯುವಂತಾಗಲಿ ಎಂದು ಹೇಳಿ ಶುಭಹಾರೈಸಿದರು. ಯೋಜನೆಯಡಿ ತಿಂಗಳಿಗೆ ಒಂದು ಗ್ರಾಂ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಒಂದು ವರ್ಷದಲ್ಲಿ 12 ಗ್ರಾಂ ಚಿನ್ನ ನಿಮ್ಮದಾಗಲಿದೆ. ಜೊತೆಗೆ ಬೋನಸ್ ಕೂಡ ಈ ಸಂಸ್ಥೆ ನೀಡುತ್ತಿದೆ ಎಂದರು.


ಜಿಎಲ್ ಆಚಾರ್ಯ ಜ್ಯುವೆಲ್ಲರ‍್ಸ್‌ನ ಮುಖ್ಯಸ್ಥ ಬಲರಾಮ ಆಚಾರ್ಯ ಮಾತನಾಡಿ, ಸ್ವರ್ಣಧಾರ ಎಂಬ ಯೋಜನೆಯು ಈ ಹಿಂದೆ ಬೇರೆ ಆವೃತ್ತಿಯಲ್ಲಿತ್ತು. ಇದೀಗ ಗ್ರಾಹಕ ಸ್ನೇಹಿಯಾಗಿ ಮರುಪ್ರಾರಂಭಿಸಿದ್ದೇವೆ. ಗ್ರಾಹಕರು ತನ್ನಿಚ್ಛೆಯಷ್ಟು ಪ್ರತಿ ತಿಂಗಳು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಹಣ ಪಾವತಿಸುವ ದಿನದಂದು ಇರುವ ಬೆಲೆಗೆ ತಕ್ಕಂತೆ ಚಿನ್ನ ಲಭ್ಯವಾಗಲಿದೆ. ಗ್ರಾಹಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.


ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜ್ಯುವೆಲ್ಲರ‍್ಸ್‌ನ ಭಾರ್ಗವ ಅವರು ಸ್ವಾಗತಿಸಿ ವಂದಿಸಿದರು. ಈ ವೇಳೆ ಸಂಸ್ಥೆಯ ಆಡಳಿತ ಪಾಲುದಾರ ಸುಧನ್ವ ಆಚಾರ್ಯ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here