ವಿದ್ಯಾರ್ಥಿ ಮಿತ್ರ ಟ್ಯೂಷನ್ ಕೇಂದ್ರ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಬೊಳ್ವಾರು ಮೆಗಾ ಜನರಿಕ್ ಮೆಡಿಕಲ್ ಹಿಂಬದಿ ಕಾರ್ಯಾಚರಿಸುತ್ತಿದ್ದ ವಿದ್ಯಾರ್ಥಿ ಮಿತ್ರ ಟ್ಯೂಷನ್ ತರಗತಿಗಳ ಕೇಂದ್ರವು ಬೊಳ್ವಾರು ರಿಲಯನ್ಸ್ ಸ್ಮಾರ್ಟ್ ಪಾಯಿಂಟ್ ಎದುರಿನ ಸೂರ್ಯಪ್ರಭ ಬಿಲ್ಡಿಂಗ್ ಗೆ ಸ್ಥಳಾಂತರಗೊಂಡು ಮೇ 23 ರಂದು ಶುಭಾರಂಭಗೊಂಡಿತು.

ಬೆಳಗ್ಗೆ ಗಣಹೋಮ ನಡೆದ ಬಳಿಕ ಸೂರ್ಯಪ್ರಭಾ ಕಟ್ಟಡದ ಮಾಲಕ ದಂಪತಿಗಳಾದ ವಸಂತ ಕಾಮತ್ ಹಾಗೂ ವಸುದಾ ಕಾಮತ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಯು ಉತ್ತಮ ರೀತಿಯಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು. 

ಶ್ರೀ ದುರ್ಗಾ ಮಲರಾಯ ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಲ್ ಗೋವಿಂದ ನಾಯಕ್ ಪಾಲೆಚ್ಚಾರ್, ಕಾರ್ಯದರ್ಶಿ ಶಂಕರ್ ಭಟ್, ಪಿ.ಎಸ್.ವಿ ಪ್ರಾಜೆಕ್ಟ್ ನಿರ್ದೇಶಕರಾದ ಪ್ರಸನ್ನ ಬಲ್ಲಾಳ್ ರವರು ಶುಭ ಹಾರೈಸಿದರು. 

ಸಂಸ್ಥೆಯಿಂದ ಕಲಿಕೆ ಪಡೆಯುತ್ತಿರುವ ಹಿರಿಯ ವಿದ್ಯಾರ್ಥಿಗಳಾದ ಅವನಿ, ಸ್ವಸ್ತಿಕ್ ಮತ್ತು ಕೃತಿಕಾ ತಮ್ಮ ಅನುಭವವನ್ನು ಹಂಚಿಕೊಂಡರು. ಸಂಸ್ಥೆಯ ಸಂಚಾಲಕಿ ಶೃತಿ ನಾಯಕ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಹೆಸರಿನಂತೆ ಮಿತೃತ್ವ ಬಾಂಧವ್ಯ ಬೆಳೆಸುವುದರೊಂದಿಗೆ  ಕಷ್ಟ ಸಾಧ್ಯವಾದ ವಿಷಯಗಳ ಪಾಠಗಳ ಕಲಿಕೆಯನ್ನು ಇಷ್ಟಪಟ್ಟು ಕಲಿಯುವ ವಿಶೇಷ ಕಲಿಕೆಯನ್ನು ಸಂಸ್ಥೆ ನೀಡುತ್ತದೆ ಎಂದು ಹೇಳಿ ಸ್ವಾಗತಿಸಿದರು. 

ಕೃತಿಕಾ ಪ್ರಾರ್ಥಿಸಿದರು. ದುರ್ಗಾಪ್ರಸಾದ್ ಪಾಲೆಚ್ಚಾರ್ ವಂದಿಸಿದರು. ಡಾ.ಪ್ರತಿಭಾ ಕಲ್ಲೂರಾಯ, ಭವಾನಿ ಶಂಕರ್, ಪ್ರಕಾಶ್ ವಾಗ್ಳೆ, ಸೌಮ್ಯ ಸಂತೋಷ್, ವಸಂತ ನಾಯಕ್ ಅಜೇರು, ಛಾಯಾ ಕುಟೀರ ಮಾಲಕ ಮುರಳಿ ಕಲ್ಲೂರಾಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

 ವೈಶಿಷ್ಟ್ಯತೆಗಳು:

ಅನುಭವಿ ಅಧ್ಯಾಪಕರು, ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕ ಗಮನ, ನಡವಳಿಕೆಯ ಮಾರ್ಪಾಡು, ಓದುವಿಕೆ ಮತ್ತು ಬರವಣಿಗೆ ಕೌಶಲ್ಯಗಳು, ಪೋಷಕರಿಗೆ ನಿಯಮಿತವಾಗಿ ವರದಿ ಮಾಡುವುದು, ನಿಯಮಿತ ಪರೀಕ್ಷಾ ಸರಣಿಗಳು. ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಅತ್ಯುತ್ತಮ ಸಾಧನೆ ಮಾಡಲು ಸಹಾಯ ಮಾಡುವುದು. ಪ್ರತಿಯೊಂದು ವಿಷಯವನ್ನು ಅರ್ಥಮಾಡಿಕೊಳ್ಳಲು ವಿಶ್ವಾಸಾರ್ಹ ಮೂಲ ಸ್ನೇಹಿ ವಾತಾವರಣ, ಕಲಿಕೆಯ ಸುಲಭ ವಿಧಾನ, ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ, ‌ಅತ್ಯಂತ ಪರಿಣಾಮಕಾರಿ ಕೈಗೆಟುಕುವ ಮತ್ತು ಅನುಕೂಲಕರ ಬೋಧನಾ ತರಗತಿಗಳು ಸಂಸ್ಥೆಯ ವೈಶಿಷ್ಟ್ಯತೆಯನ್ನು ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸಂಸ್ಥೆಯು 1ನೇ ತರಗತಿಯಿಂದ 10 ನೇ ತರಗತಿಯವರೆಗೆ ಬೋಧನಾ ತರಗತಿಗಳನ್ನು ಒದಗಿಸುತ್ತದೆ. ತರಗತಿಗಳು ಸಂಜೆ 4-30 ರಿಂದ 6-30 ರವರೆಗೆ ಆರಂಭವಾಗುತ್ತವೆ. ರಾಜ್ಯ ಮತ್ತು ಸಿ.ಬಿ.ಎಸ್.ಇ ಬೋರ್ಡ್ ಸಿಲೆಬಸ್ ನಲ್ಲಿ  ಬೋಧನೆ, ಸೀಮಿತ ವಿದ್ಯಾರ್ಥಿಗಳಿಗೆ ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ 9986551415, 9980560820 ನಂಬರಿಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here