ಪುತ್ತೂರು: ನಿವೃತ್ತ ಶಿಕ್ಷಕ ಸಂಜೀವ ರೈ ಪಿಜಿನಡ್ಕಗುತ್ತು ಅವರ 25ನೇ ಪುಣ್ಯ ಸ್ಮರಣೆಯ ಪ್ರಯುಕ್ತ ಕೋಡಿಂಬಾಡಿ ರೈ ಎಸ್ಟೇಟ್ ನಲ್ಲಿರುವ ಅವರ ಸಮಾಧಿ ಬಳಿ ಮೇ.24ರಂದು ಕುಟುಂಬಸ್ಥರಿಂದ ನುಡಿನಮನ ಕಾರ್ಯಕ್ರಮ ನಡೆಯಿತು.
ಸಂಜೀವ ರೈ ಅವರ ಪತ್ನಿ ಗಿರಿಜಾ ಎಸ್.ರೈ, ಪುತ್ರರಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸೊಸೆಯಂದಿರಾದ ಪ್ರೀತಿ ಆರ್.ರೈ, ಸುಮ ಅಶೋಕ್ ರೈ, ಪುತ್ರಿಯರಾದ ವಿಶಾಲಾಕ್ಷಿ ವಿ.ರೈ, ನಳಿನಿ ಪಿ. ಶೆಟ್ಟಿ, ಮೊಮ್ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.