





ಬಡಗನ್ನೂರು: ದ ಕ ಜಿ ಪಂ ಉ ಹಿ.ಪ್ರಾ ಶಾಲೆ ಬಡಗನ್ನೂರು ಇದರ ಶಾಲಾ ಪ್ರಾರಂಭೋತ್ಸವ ಶಾಲಾಭಿವೖಧ್ಧಿ ಸಮಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಜೂ.2ರಂದು ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾರಾಯಣ ರೖೆ ಕುದ್ಕಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆ ನಮ್ಮ ಶಾಲೆ. ಆದರ ಉಳಿವು ನಮ್ಮ ಕೖೆಯಲ್ಲಿದೆ. ಸರಕಾರ ಮಕ್ಕಳಿಗೆ ಉಚಿತ ಶಿಕ್ಷಣ ಜತೆ ಪಠ್ಯ ಪುಸ್ತಕ ಸಮವಸ್ತ್ರ, ಇತ್ಯಾದಿ ಸೌಲಭ್ಯಗಳನ್ನು ನೀಡುತ್ತದೆ. ಇದರೊಂದಿಗೆ ನಮ್ಮೂರ ಸರಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಸಂಖ್ಯೆಯನ್ನು ಕಾಯ್ದಿಕೊಳ್ಳುವ ದೖಷ್ಟಿಯಿಂದ 1ನೇ ತರಗತಿಯಿಂದ 8 ತರಗತಿ ವರೆಗಿನ ಎಲ್ಲಾ ಮಕ್ಕಳಿಗೆ ಬರೆಯುವ ಪುಸ್ತಕ ನೀಡುವುದಾಗಿ ಹೇಳಿದರು.


ಮಕ್ಕಳಿಗೆ ಉಚಿತ ಪಠ್ಯ ಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದ ಮಹಮ್ಮದ್ ಬಡಗನ್ನೂರು ರಾಜ್ಯದ ಸುಮಾರು 45 ಸಾವಿರ ಶಾಲೆ ಮತ್ತು ಪ್ರೌಢಶಾಲೆಗಳು ಇಂದು ಆರಂಭಗೊಂಡಿದೆ. ಮಕ್ಕಳು ದೇಶದ ಆಸ್ತಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮದಾಗಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಶಿಕ್ಷಕರ ನೇಮಕಗೊಳ್ಳುತ್ತಾರೆ. ಮಕ್ಕಳ ಅನುಪಾತ ಲೆಕ್ಕ ಮಾಡಿದಾಗ ಕಡಿಮೆಯಾಗಿದೆ. ಮಾನವ ಸಂಪನ್ಮೂಲಗಳು ಬೇಕಾಗಿದೆ. ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರಕಾರಿ ಶಾಲೆಗಳ ಉಳಿವಿಗೆ ನಾವೆಲ್ಲರೂ ಸಹಕರಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡುವಂತೆ ಹೇಳಿದರು. ಮೂರು ಗ್ರಾಮಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಒಂದು ಸರಕಾರಿ ಮಾದರಿ ಶಾಲೆ ಮಾಡುವ ಯೋಜನೆ ಬಗ್ಗೆ ಶಾಸಕರು ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅದು ಬಡಗನ್ನೂರಿನ ನಮ್ಮ ಶಾಲೆಯೂ ಆಗಬಹುದು. ಆ ಸಂದರ್ಭದಲ್ಲಿ ಶಾಲೆಗೆ ಬೇಕಾದ ಎಲ್ಲಾ ಮೂಲ ಸೌಕರ್ಯ ಒದಗಿಸುವ ಸಂಪೂರ್ಣ ಜವಾಬ್ದಾರಿ ಸರಕಾರದಾಗಿರುತ್ತದೆ. ಒಟ್ಟಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಇದರೊಂದಿಗೆ ಇಂದು ಎಲ್ ಕೆಜಿ ಕೂಡಾ ಪ್ರಾರಂಭಗೊಂಡಿದೆ. ಮಕ್ಕಳ ಮುಂದಿನ ಜೀವನ ಉಜ್ವಲವಾಗಲಿ ಎಂದು ಹೇಳಿ ಶುಭ ಹಾರೖೆಸಿದರು.





ನೊಟ್ಸ್ ಪುಸ್ತಕದ ಕೊಡುಗೆ
ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು ಕೂಡುಗೖೆ ದಾನಿಗಳು ಅಗಿರುವ ನಾರಾಯಣ ರೖೆ ಕುದ್ಕಾಡಿ ಶಾಲೆಯ ಬಡ 85 ಮಕ್ಕಳಿಗೆ ನೋಡ್ಸ್ ಪುಸ್ತಕ ಕೊಡುಗೆಯಾಗಿ ನೀಡಿದರು.
ನೂತನ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಬಲೂನ್ ನೀಡಿ ಸ್ವಾಗತಿಸಿ, ಬ್ಯಾಂಡ್ ವಾದ್ಯ ಘೋಷದೊಂದಿಗೆ ಶಾಲಾ ಮುಖ್ಯ ದ್ವಾರದಿಂದ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಶಾಲಾ ಪ್ರಭಾರ ಮುಖ್ಯ ಶಿಕ್ಕಕಿ ಹರಿಣಾಕ್ಷಿ ಎ ಸರಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸದಸ್ಯ ಗಿರೀಶ್ ಕನ್ನಯ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರುಗಳಾದ ಹರಿಣಾಕ್ಷಿ ಎ ಸ್ವಾಗತಿಸಿ, ಮಧುಶ್ರೀಯವರು ವಂದಿಸಿ, ಜಿಪಿಟಿ ಶಿಕ್ಷಕಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಚೈತ್ರ, ಸರಿತಾ ಸಹಕರಿಸಿದರು.






